Monday, November 23, 2026

ಪ್ರಾಯೋಗಿಕ ಆವೃತ್ತಿ

ಹಬ್ಬ- ಜಾತ್ರೆ, ಉತ್ಸವಗಳು ಸಂಸ್ಕೃತಿಯ ಪ್ರತಿಬಿಂಬ : ಚಲುವರಾಯಸ್ವಾಮಿ

ಭಾರತದ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ. ಹಬ್ಬ- ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ ವಾಗಿವೆ. ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅಭಿಮತಪಟ್ಟರು.

ಕೃಷ್ಣರಾಜಪೇಟೆ ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದ ಊರ ಹಬ್ಬದ ಅಂಗವಾಗಿ ನಡೆದ ಬಲಿಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಭಾಗವಹಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭಾರತ ದೇಶದ ಸನಾತನ ಹಿಂದೂ ಧರ್ಮಕ್ಕೆ ವಿಶೇಷವಾದ ಶಕ್ತಿಯಿದೆ. ಶ್ರೀರಾಮ, ಭಗವಾನ್ ಬುದ್ಧ, ಶ್ರೀಕೃಷ್ಣ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಹಲವಾರು ಮಹನೀಯರು ಜನಿಸಿ ಓಡಾಡಿರುವ ಭಾರತದ ನೆಲದ ಮಣ್ಣಿಗೆ ವಿಶೇಷವಾದ ಶಕ್ತಿಯಿದೆ. ನಾವು ಕನ್ನಡಿಗರು, ವಿಶೇಷವಾಗಿ ಭಾರತೀಯರು ಎನ್ನಲು ಹೆಮ್ಮೆಪಡಬೇಕು ಎಂದು ಅಭಿಮಾನದಿಂದ ಹೇಳಿದರು.

ನೇಕಾರ ಸಮುದಾಯ ಸೇರಿದಂತೆ ಹಿಂದುಳಿದ ಸಮುದಾಯಗಳ ಜನರೇ ಹೆಚ್ಚಾಗಿ ವಾಸವಾಗಿರುವ ಕೊರಟಿಕೆರೆ ಗ್ರಾಮದಲ್ಲಿ 15 ವರ್ಷಗಳ ನಂತರ ನಡೆಯುತ್ತಿರುವ ಊರಹಬ್ಬವು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ವಿಶೇಷವಾಗಿ ಬೆಳಕು ಚೆಲ್ಲಿದೆ. ಊರಹಬ್ಬದ ಅಂಗವಾಗಿ ಪ್ರಾಣಿ ಬಲಿ ನೀಡದೇ ನಡೆದ ಬಲಿ ಪ್ರಧಾನ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ. ದೇವಿಗೆ ಬಲಿ ಅನ್ನ ನೀಡಲು ಹೋಗಿದ್ದ ಎಲ್ಲಾ ಐವರು ಸುರಕ್ಷಿತವಾಗಿ ಮರಳಿ ಬಂದಿರುವುದೇ ದೇವಿಯ ಶಕ್ತಿಯ ಮಹಿಮೆಯನ್ನು ಸಾರಿ ಹೇಳುತ್ತಿದೆ. ಊರಹಬ್ಬದ ಯಶಸ್ಸಿಗೆ ಹಲವು ಮಹನೀಯರು ಕೈಜೋಡಿಸಿದ್ದಾರೆ. ಯಾವುದೇ ಗಲಾಟೆ ಗದ್ದಲಗಳಿಗೆ ಅವಕಾಶ ನೀಡದೇ ಒಂದು ವಾರಗಳ ಕಾಲ ನಡೆದ ಹಬ್ಬವನ್ನು ಯಶಶ್ವಿಗೊಳಿಸಿದ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಹೇಳಿದರು.

ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡ ಬಿ.ಎಲ್. ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವನಾಥ್, ಆದಿಹಳ್ಳಿ ಮೀನಾಕ್ಷಿ, ಮನ್ ಮುಲ್ ನಿರ್ದೇಶಕರಾದ ಎಂ. ಬಿ.ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆತ್ತಗೋನಹಳ್ಳಿ ನಾರಾಯಣಗೌಡ, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್, ಬಿಜೆಪಿ ಹಿರಿಯ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಉದ್ಯಮಿ ಬಿ.ರಾಜಶೇಖರ್, ಚೇತನಾ ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕುಮಾರ್, ಕೆ.ಆರ್.ರಾಜೇಶ್, ರವಿ, ಮಂಜುನಾಥ್, ಆದಿಹಳ್ಳಿ ಮೀನಾಕ್ಷಿ, ಕೆ.ಎನ್.ಕೃಷ್ಣೆಗೌಡ, ದೇವನಾಥ ಮತ್ತತರರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ