ಮಂಡ್ಯ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯ ಆವರಣದಲ್ಲಿ ಶೈಕ್ಷಣಿಕ ವರ್ಷ 2024 -25 ನೇ
ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ , ಚಿತ್ರಕಲೆಯಲ್ಲಿ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದ ವಿದ್ಯಾರ್ಥಿಗೆ ಮತ್ತು ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆ ಯಾದ ಎನ್ಎಂಎಂಎಸ್ ನಲ್ಲಿ ತೆರ್ಗಡೆಯಾದ ಎಂಟನೇ ತರಗತಿಯ ಆರು ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಸಮಾರಂಭದಲ್ಲಿ 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಚೈತ್ರ ಎಸ್(619), ದೀಕ್ಷಿತ ಎನ್ (619), ಉಮೇ ಕುಲ್ಸಮ್ (613), ಸಾಲಿಹಾ ಮೊಹಮ್ಮದಿ(610), ಸ್ನೇಹ ಎಂಆರ್ (610), ತನ್ಮಯ ಎಂ ಎಸ್ (610), ದೀಕ್ಷಿತ ಎಸ್(607 ), ಮತಿಹಾ ಕೌಸರ್(606), ಸಿಂಚನ ಎಂ(563), ತೇಜಸ್ವಿನಿ ಡಿಆರ್(538) ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯ ಚಿತ್ರಕಲಾ ಸ್ಪರ್ಧೆಯಲ್ಲಿ ಅಸಾಧಾರಣ ಪ್ರತಿಭೆ ಸಾಧನೆ ಪ್ರಶಸ್ತಿ ಪಡೆದ ಮೋನಿಷಾ ಎಸ್ ಅವರನ್ನು ಸನ್ಮಾನಿಸಲಾಯಿತು.
ಜೊತೆಗೆ ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೆರ್ಗಡೆಯಾದ ನೂರ್ನಬಿಲಾ ಫಾತಿಮಾ, ಚಿನ್ಮಯಿ ವೈಟಿ ,ದೀಕ್ಷಾ ಎಸ್, ವಿಭನಯನ ಶೆಟ್ಟಿ, ಹಾಫಿಯಾ ಫಾತಿಮಾ ,ಜುಮ್ಮೆರಾ ಅಮ್ಬರ್, ನೂರ್ ನಬಿಲ, ಮದೀಹ ಕೌಸರ್ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ಸಂತ ಜೋಸೆಫರ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ವೀಣಾ, ಸಂತ ಜೋಸೆಫರ ದೇವಾಲಯದ ಸಹಾಯಕ ಧರ್ಮ ಗುರು ಫಾದರ್ ಆಂಟೊನಿ ಕುಮಾರ್, ಸಂತ ಜೋಸೆಫರ ವಿದ್ಯಾಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಪೌಲಿನ, ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯವರಾದ ಸಿಸ್ಟರ್ ಫ್ಲೋರ, ಹಿರಿಯ ಸಿಸ್ಟರ್ ಬೆನಿಗ್ನಾರವರು ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸುಭಾಷಿಣಿ ಅವರು ಭಾಗವಹಿಸಿದ್ದರು.




