Monday, November 23, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ನ್ಯಾ.ಅರಳಿ ನಾಗರಾಜ್ ಅವರಿಂದ ಶರಣರ ಚಿಂತನ – ಮಂಥನ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಎಂ ಬೆಟ್ಟಹಳ್ಳಿ ಗ್ರಾಮದ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂಎಸ್ ಮಂಜುನಾಥ್ ಮನೆಗೆ, ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು, ಭೇಟಿ ನೀಡಿ, ಶರಣರ,ಚಿಂತನ ಕುರಿತು ಚರ್ಚಿಸಿದರು.

ನಂತರ ಕಣಿವೆ ಕೊಪ್ಪಲು, ಗ್ರಾಮದ ಪರಿಸರ ಪ್ರೇಮಿ, ಬಸವತತ್ವದ ಚಿಂತಕ ಲವಕುಮಾರ್ ಮನೆಯಲ್ಲಿ ವಿಶ್ವ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಿ, ಮನೆಯ ಆವರಣದಲ್ಲಿ ಗಿಡವನ್ನು ನೆಟ್ಟರು.

ನಂತರ ಅರಳಿ ನಾಗರಾಜ್ ಮಾನತಾಡಿ, ಬಸವಣ್ಣನವರ ವಚನಗಳು ಸಮಾಜದ ಶರಣರೆಲ್ಲರಿಗೂ ವಚನವಾದಾಗ ಮಾತ್ರವೇ ಸಮಾಜದಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದರಲ್ಲದೇ, ಕೇವಲ ಬಸವಣ್ಣನವರ ಒಂದು ದಿನದ ಆಡಂಬರದ ಕಾರ್ಯಕ್ರಮಗಳು, ಖರ್ಚು ವೆಚ್ಚಗಳನ್ನು ಮಂಡಿಸುವ, ಮುಂದಿನ ಆವೇಶದ ಭರವಸೆಯ ಪೊಳ್ಳು ನುಡಿಗಳಿಂದ ಪ್ರಯೋಜನವಾಗುವುದಿಲ್ಲ, ಆಚರಣೆಯ ನೂರು ಅಂಶಗಳಲ್ಲಿ ಹತ್ತು ಭಾಗವಾದರೂ‌ ಬೆಳಕು ಕಾಣುವಂತೆ ಇತರರಿಗೂ ಮಾದರಿಯಾಗುವಂತೆ ಮನುಜರ ಮನಪರಿವರ್ತನೆ ಆದಾಗ ಮಾತ್ರವೇ ಆಚರಣೆಗಳು ಸಾರ್ಥಕವಾಗಿ ‘ಇವ ನಮ್ಮವ ಇವ‌ ನಮ್ಮವನೆಂಬ’ ಸೊಲ್ಲಿಗೆ, ಜಗವೆ ಗೆಲ್ಲುವ ಪ್ರೀತಿಯ ಮಲ್ಲಿಗೆ ತನ್ನ ನಿಜ ಸೌಲಭ್ಯವನ್ನು ಹರಡುವುದರ ಮೂಲಕ, ಬಸವಣ್ಣನ ತತ್ವಗಳ ಸತ್ವ ಸಮಾಜದ ಏಳಿಗೆಗೆ ಕಾರಣವಾಗುತ್ತವೆ ಎಂದರು.

ಪರಧನ ಒಲ್ಲನೆಂಬ , ಸುಳ್ಳು ಸಲ್ಲದೆಂಬ, ಹಿಂಸೆ ಮಾಡನೆಂಬ ,ಮನದ ಮನೋಬಿಂಬ ಕನ್ನಡಿಯಂತೆ
ಹೃದಯ ತುಂಬಿದಾಗ , ತನ್ನ ತಾನು ಬಣ್ಣಿಸದೇ,ಇದರ ಹಳಿಯದೇ. ತಾನು ತುಳಿಯುವ ಹಾದಿ‌ ಶಿವಮೆಚ್ಚುವ, ಸಂವಾದದಲ್ಲಿ ಮಾತನಾಡಿ ಪ್ರತಿಯೊಬ್ಬರು ಸರಳ ಜೀವನವನ್ನು ಅಳವಡಿಸಿಕೊಳ್ಳಬೇಕು ಮಹಾತ್ಮರ ತತ್ವ ಆದರ್ಶಗಳನ್ನ ಪಾಲಿಸುವಂತಾಗಬೇಕು, ಮೂಢನಂಬಿಕೆ ಬ್ರಾಹ್ಮಣ್ಯ ವೈದಿಕ ಆಚರಣೆಗಳು ತೊಲಗಬೇಕು, ದೇವರನ್ನು ಹುಡುಕಿಕೊಂಡು ಎಲ್ಲೂ ಹೋಗಬಾರದು, ತಮ್ಮ ಕಾಯಕದಲ್ಲೇ ದೇವರನ್ನ ಕಾಣುವಂತಾಗಬೇಕು, ದೇವರು ಸರ್ವ ವ್ಯಾಪ್ತಿ ಎಲ್ಲಾ ಕಡೆ ಇದ್ದಾನೆ, ಪ್ರಕೃತಿಯನ್ನ ಗೌರವಿಸಿ ಪೂಜಿಸುವಂತಾಗಬೇಕು ಎಂದರು.

ಎಂ ಎಸ್ ಮಂಜುನಾಥ್ ಮಾತನಾಡಿ 12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲಾ ಧರ್ಮದ ಜನಾಂಗದವರನ್ನು ಒಳಗೊಂಡಂತೆ, ತುಳಿತಕ್ಕೆ ಒಳಗಾದ ಅಸ್ಪೃಶ್ಯರಿಗೆ ಸಮಾನತೆಯನ್ನ ಕಲ್ಪಿಸಿ 770 ಶರಣರು ಮುಕ್ತವಾಗಿ ಚರ್ಚಿಸುವ ಸಮಾನತೆಯನ್ನ ಕಲ್ಪಿಸಿ ಭದ್ರ ಬುನಾದಿ ಹಾಕಿದ ಬಸವಾದಿ ಶರಣರು ಸ್ಥಾಪಿಸಿದ ಬಸವ ಧರ್ಮ ಎಲ್ಲರನ್ನ ಒಳಗೊಂಡಿದೆ ಎಂದರು

ಓಂಕಾರಪ್ರಿಯ ಬಾಗೇಪಲ್ಲಿ ಮಾತನಾಡಿ ಯುವಕರಲ್ಲಿ ಸಮಾಜಮುಖೀ ಸೇವೆ, ಪರಿಸರ‌, ದೇಶಪ್ರೇಮ, ಸಂಸ್ಕೃತಿ ಸಂಸ್ಕಾರಗಳನ್ನು ಬೆಳೆಸುವ ಶಿಬಿರಗಳು, ಶರಣತತ್ವಗಳ ಆಚರಣೆಗಳು, ಶಾಲಾ ಶಿಕ್ಷಣದ ಜೊತೆಗೇ ಅನುಷ್ಠಾನಕ್ಕೆ ಬರುವಂತೆ ಹಿರಿಯರೂ‌ ಶಿಕ್ಷಣಪ್ರೇಮಿಗಳು, ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಆಸಕ್ತಿವಹಿಸಬೇಕೆಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಉಪಾಧ್ಯಕ್ಷ ಜಯರಾಮ್, ದೇವಪ್ಪ, ಧನ್ಯ ಕುಮಾರ್, ರಂಗಭೂಮಿ ಕಲಾವಿದ ಶಿಕ್ಷಕ ನಂಜುಂಡಸ್ವಾಮಿ, ರವಿಕುಮಾರ್,ಮಹೇಶ್, ಮರಿಗೌಡ ವೆಂಕಟೇಶ, ಚಂದ್ರು ಮಾದಪ್ಪ ಶಂಭು ಸತೀಶ್,ಯೋಗೇಂದ್ರ ನವೀನ, ಶಶಿ ಹೇಮಂತ್ ಕುಮಾರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ