Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜೂ. 29 ಕ್ಕೆ ಯು-15 ಓಪನ್ ಚೆಸ್ ಟೂರ್ನಮೆಂಟ್

ದಿ ವಿಝರ್ಡ್ ಗುರು ಟ್ರಸ್ಟ್ ಮಂಡ್ಯ, ರಾಯಲ್ ಚೆಸ್ ಅಕಾಡೆಮಿ, ಹೆಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೊಕೆಟ್ಸ್ ರಿಕ್ರಿಯೇಷನ್ ಕ್ಲಬ್ ಮತ್ತು ಇಂಗಳೆ ಫೌಂಡೇಶನ್ ಸಹಯೋಗದಲ್ಲಿ ಯು-15 ಓಪನ್ ಚೆಸ್ ಟೂರ್ನಮೆಂಟನ್ನು ಜೂ.29ರಂದು ಮಂಡ್ಯನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಬಾರ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೆಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೊಕೆಟ್ಸ್ ರಿಕ್ರಿಯೇಷನ್ ಕ್ಲಬ್ ನ ಅಧ್ಯಕ್ಷ ಸಿ ಎಲ್ ಶಿವಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಟ್ಟದ ಸ್ಪರ್ಧೆಯಾಗಿರುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ದಿಗಳು ಆಗಮಿಸುವ ನೀರಿಕ್ಷೆಯಿದೆ, ಆದ್ದರಿಂದ ಮಂಡ್ಯ ಜಿಲ್ಲೆಯ ಮಕ್ಕಳು ಈ ಸ್ಪರ್ಧೆಯ ಸದುಪಯೋಗ ಪಡೆದುಕೊಳಬೇಕು ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿಗಳು, ಕವಿಗಳು ,ಲೇಖಕರು, ಬರೆದಿರುವ ಪುಸ್ತಕ ಲೇಖಕನ ಮತ್ತು ಕವಿತೆಗಳನ್ನು ಸಂಗ್ರಹ ಮಾಡಿ ನಮ್ಮ ಸಂಘದ ಆವರಣದಲ್ಲಿ ಗ್ರಂಥಾಲಯವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಹಿರಿಯ ಸಾಹಿತಿಗಳು, ಕವಿಗಳು, ಲೇಖಕರು , ಯುವ ಬರಹಗಾರರು ಸಹಕಾರ ನೀಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ವಕೀಲರಾದ ಹೆಚ್ ಎಂ ಹರಿಪ್ರಸಾದ್ , ಎಂ ಎಸ್ ಸತೀಶ್ , ಜಿಲ್ಲಾ ಚೆಸ್ ಅಸೋಸಿಯೇಷನ್ ಸದಸ್ಯ ಎಂ ಎಸ್ ಚೇತನ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ