Friday, November 20, 2026

ಪ್ರಾಯೋಗಿಕ ಆವೃತ್ತಿ

ಶ್ರಮಿಕರು ನೆಲೆನಿಲ್ಲಲು ಒಂದು ಸೂರು ಬೇಡವೇ ; ಮಂಡ್ಯ ತಮಿಳು ಕಾಲೋನಿಯ ಮೇಲೇಕೆ ಕೆಲವರ ಕಣ್ಣು ಬಿದ್ದಿದೆ ?

ಸಿದ್ದರಾಜು
ಕಾರ್ಯದರ್ಶಿ, ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟ ಸಮಿತಿ

ಮಂಡ್ಯ ನಗರಗಳಲ್ಲಿ 20ಕ್ಕೂ ಹೆಚ್ಚು ಕೊಳಗೇರಿ ಪ್ರದೇಶಗಳಲ್ಲಿ ಕಡು ಬಡತನಗಳಿಂದ ಸಣ್ಣಪುಟ್ಟ ಗುಡಿಸಲು ಸೀಟಿನ ಮನೆಗಳಲ್ಲಿ ವಾಸ ಮಾಡುವ ಜನರ ಬದುಕು ಮೂರಬಟ್ಟೆ ಆಗುತ್ತಿದೆ. ಬಡಜನರ ವಿರುದ್ದ ಕಾಯ್ದೆಗಳನ್ನು ಜಾರಿಮಾಡಲು ಶ್ರೀಮಂತರು ನಿಲುವುಗಳನ್ನು ತೆಗೆದು ಕೊಂಡು ಬೆಂಬಲಕ್ಕೆ ನಿಲ್ಲುತ್ತಾರೆ, ವಿನಃ ಬಡ ವರ್ಗದ ಜನರ ಪರ ಯಾವತ್ತು ನಿಲ್ಲುವುದಿಲ್ಲ.

ಮಂಡ್ಯದ ಜಿಲ್ಲಾ ಆಸ್ಪತ್ರೆ ಮತ್ತಷ್ಟು ಉನ್ನತ್ತೀಕರಣ ಅಗಬೇಕು, ಒಳ್ಳೆಯ ಆರೋಗ್ಯ ಎಲ್ಲಾ ವರ್ಗದ ಜನರಿಗೆ ಸಿಗಬೇಕು ನಿಜ. ಇದರ ಜತೆಗೆ ಬಡತನದಲ್ಲಿ ಬದುಕುತ್ತಿರುವ ಜನರ ಮೇಲೆಯು ಸ್ವಲ್ಪ ಸಹಾನುಭೂತಿ, ಕಾಳಜಿ ಇರಬೇಕಲ್ಲವೆ ? ತಮಿಳು ಕಾಲೋನಿಯ ಜನರು ಅಲ್ಲಿ ನೆಲೆಸಿರುವುದಕ್ಕೆ ನಗರದ ಸ್ಥಳೀಯ ಆಡಳಿತಗಳು ಸಾಕಷ್ಟು ದಾಖಲೆಗಳನ್ನು ನೀಡುತ್ತವೆ. ಜಿಲ್ಲಾಸ್ಪತ್ರೆಯ ಕಲ್ಲು ಕಟ್ಟಡ ಕಟ್ಟಲು ಈ ಸಮುದಾಯದ ಹಿರಿಯ ತಲೆಮಾರುಗಳು ಸಹ ಶ್ರಮಿಸಿದ್ದಾರೆ. ಇದಲ್ಲದಲ್ಲದೆ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಕನ್ನಂಬಾಡಿ ಕಟ್ಟೆ ನಿರ್ಮಾಣ ಮಾಡಲು ಈ ಜನರನ್ನು ತಮಿಳುನಾಡು ಮೂಲದಿಂದ ಕರೆದು ಕೊಂಡು ಬಂದ ನಂತರ ಮಹಾರಾಜರು ಇವರುಗಳನ್ನು ಇಲ್ಲೇ ಉಳಿಸಿ ಎಲ್ಲಾ ತಮಿಳರಿಗೆ ಉಳಿಮೆ ಮಾಡಲು ಜಾಗ, ನಿವೇಶನ, ವಸತಿ ಸೇರಿ ಅನೇಕ ಕೊಡುಗೆಗಳನ್ನು ಸಹ ನೀಡಿದ್ದಾರೆ.

ಇಂದು ತಮಿಳು ಜನರು ಸಂಪೂರ್ಣ ಕನ್ನಡಿಗರಾಗಿ ನಮ್ಮ ನಡುವೆಯೆ ಬೆರೆತು ಹೋಗಿರುವುದನ್ನು ಮರೆಯಬಾರದು. ಇಂದು ಮಂಡ್ಯ ನಗರದಲ್ಲಿ ಎಷ್ಟೊ ಶ್ರೀಮಂತ ವರ್ಗದ ಜನರು ಸರ್ಕಾರದ ಜಾಗಗಳನ್ನು ಒತ್ತುವರಿ ಮಾಡಿ ಕೊಂಡು ಐಷಾರಾಮಿ ಜೀವನ ನಡೆತ್ತಿದ್ದರು, ಇಂತವರನ್ನು ಯಾರು ಸಹ ಪ್ರಶ್ನಿಸುವುದಿಲ್ಲ. ತಮಿಳು ಕಾಲೋನಿಯ ಜನರು ವಾಸ ಮಾಡುವ ಜಾಗದ ಪಕ್ಕದಲ್ಲೇ ಹತ್ತಾರು ಎಕ್ಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಹಲವರು ದುಡುಮೆ ಮಾಡುತ್ತಿರುವುದು ಯಾರ ಕಣ್ಣಿಗೂ ಕಾಣುವುದಿಲ್ಲವೇ ? ಅದರೆ ನೂರಾರು ವರ್ಷಗಳ ಹಿಂದೆ ಅವರ ಮುತ್ತಜ್ಜರ ದಿಂದ ವಾಸ ಮಾಡುವ ಜಾಗ ಮಾತ್ರ ಇಂದು ಕಣ್ಣಿಗೆ ಕೆಲವು ಪಟ್ಟಭದ್ರ ಸಂಘಟನೆಗಳ ಮುಖಂಡರ ಕಣ್ಣಿಗೆ ರಾಚುತ್ತಿದೆ.

ತಮಿಳು ಕಾಲೋನಿಯವರಿಗೆ ಕೆರಯಂಗಳದಲ್ಲಿ ಮನೆಯನ್ನು ಕಟ್ಟಿ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ರಾಜೀವ್ ಗಾಂಧಿ ಅವಾಸ್ ಯೋಜನೆ (RAY) ಯ ಮಾರ್ಗಸೂಚಿಯಲ್ಲಿ ಜನರ ಅಭಿಪ್ರಾಯ ಪಡೆದು ಜನರು ಒಪ್ಪಿದ ರೀತಿಯಲ್ಲಿ ಮನೆ ಕಟ್ಟಿ ಕೊಡಬೇಕು ಈ ಅಭಿಪ್ರಾಯವನ್ನು ಸಹ ಮಂಡ್ಯ ಜಿಲ್ಲಾಡಳಿತ ಕೇಳದೆ G+2 ಮನೆಗಳನ್ನು ನಿರ್ಮಾಣ ಮಾಡಿ, ಹೋಗಿ ಹೋಗಿ ಅಂದರೆ ಯಾಕೇ ಹೋಗಬೇಕು ? ಈಗ ವಾಸಮಾಡುತ್ತಿರುವ ಜಾಗದಲ್ಲಿ ನೆಲದಲ್ಲಿ ವಾಸ ಮಾಡುತ್ತಿದ್ದಾರೆ. ಕೆರೆ ಮುಚ್ಚುವಾಗ, ಅಸ್ಪತ್ರೆಗೆ ಜಾಗಬೇಕು ಇವರಿಗೆ 30+40 ಜಾಗ ಕೊಟ್ಟು ನೀವು ಅಲ್ಲಿಗೆ ಹೋಗಿ ಎಂದು ಯಾರು ಸಹ ದ್ವನಿಯೆತ್ತುವ ಕೆಲಸ ಮಾಡಲಿಲ್ಲ. ಅಲ್ಲದೇ ಕೆರೆಯಂಗಲದಲ್ಲಿ ಬಲಿತವರು, ರಾಜಕಾರಣಿಗಳು ಕಣ್ಣಿಗೆ ಬೇಕಾದ ಜಾಗಗಳನ್ನು ಪಡೆದು ಕೊಂಡಿರುವುದು ಎಲ್ಲಾರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಅಂದೆ 400ಕ್ಕೂ ಹೆಚ್ವು ಎಕರೆ ಜಾಗ ಇರುವಾಗ 50 ಎಕರೆ ಜಾಗ ಅಸ್ಪತ್ರೆಗೆ ಹಾಗೂ ಒಳ್ಳೆಯ ಕಲ್ಯಾಣ ಯೋಜನೆಗಳಿಗೆ ಮೀಸಲಿಡಬೇಕೆಂದು ಯಾರಿಗೂ ಹೊಳೆಯಲಿಲ್ಲವೇ ? ಇಂದು ಮಾತ್ರ ತಮಿಳು ಕಾಲೋನಿಯ ಜನರನ್ನು ಖಾಲಿ ಮಾಡಿಸಬೇಕೆಂದು ಜಿಲ್ಲಾಡಳಿತಕಿಂತ ಹೆಚ್ಚಾಗಿ ಕೆಲವು ಪಟ್ಟಭದ್ರರಿಗೆ ಮುಖ್ಯವಾಗಿ ಬಿಟ್ಟಿದೆ.

ಮಂಡ್ಯದ ಜನತೆಗಾಗಿ ಈಗಿರುವ ಅಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ಕ್ಯಾನ್ಸರ್ ಅಸ್ಪತ್ರೆ ದಿಕ್ಕಿಲ್ಲದೆ ಖಾಲಿ ಕಟ್ಟಡ ನಿಂತಿದೆ ಮತ್ತು ಮಹಿಳೆಯರ ಹೆರಿಗೆ ಅಸ್ಪತ್ರೆಯನ್ನು ಹೊಸೂರು ಕಾಲೋನಿಗೆ ಹಸ್ತಾಂತರಿಸುವುದನ್ನು ತಡೆದು ಹೊಸದಾಗಿ ಕಟ್ಟಿರುವ ಕಟ್ಟಡದಲ್ಲೇ ಮಾಡಲು ಹೋರಾಡಬೇಕಾಗಿದೆ.

ಹಲವು ವೈದ್ಯರು ಜನರಿಗೆ ಸರ್ಕಾರಿ ಅಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ನೀಡದೆ ತಮ್ಮ ವೈಯಕ್ತಿಕ ಖಾಸಗಿ ಅಸ್ಪತ್ರೆಗಳಿಗೆ ಬಡಜನರನ್ನು ಕಳಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳ ಕುರಿತು ಹೋರಾಡಬೇಕಿದೆ. ತಮಿಳು ಕಾಲೋನಿಯ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ತೀಪು ಏನು ಬರುತ್ತೊ ಅದಕ್ಕೆ ಬದ್ದರಾಗಿರುತ್ತೇವೆ ಎಂದು ಅಲ್ಲಿನ ಮುಖಂಡರು ಹೇಳುತ್ತಿರುವಾಗ, ತಮಿಳು ಕಾಲೋನಿ ಹಾಗೂ ಅಲ್ಲಿನ  ಜನರ ಕುರಿತು ಅಪಪ್ರಚಾರ ನಡೆಸುತ್ತಿರುವ ಕೆಲವರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ