Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯನಗರದ ವಿವಿಧೆಡೆ ಕಸದ ರಾಶಿ ; ನಿಯಂತ್ರಣಕ್ಕೆ ನಾರಾಯಣ್ ಒತ್ತಾಯ

ಮಂಡ್ಯ ನಗರ ಹಾಗೂ ಸುತ್ತಮುತ್ತಲೂ ಕಸದ ಗುಡ್ಡೆಗಳು ರಾಶಿ ರಾಶಿ ಬಿದ್ದಿದ್ದು, ನಗರದ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ರೋಗ ರುಜಿನ ಹರಡಲು ಕಾರಣವಾಗುತ್ತಿದೆ, ಆದ್ದರಿಂದ ಸಂಬಂಧಿಸಿದ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ಇದರ ನಿಯಂತ್ರಣ ಮಾಡಿ, ಸೂಕ್ತ ರೀತಿಯಲ್ಲಿ ಕಸದ ವಿಲೇವಾರಿ ಕ್ರಮಕೈಗೊಳ್ಳಬೇಕೆಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಒತ್ತಾಯಿಸಿದ್ದಾರೆ.

ಮಂಡ್ಯ ನಗರದಲ್ಲಿ ಖಾಲಿ ನಿವೇಶನ, ಚರಂಡಿಯ ಬಳಿ ರಾತ್ರೋರಾತ್ರಿ ಕಸದ ಗುಡ್ಡೆ ಸಂಗ್ರಹವಾಗುತ್ತಿದ್ದು, ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ವಿಲೇವಾರಿ ಮಾಡಬೇಕಾದ ನಗರಸಭೆ ಮತ್ತು ಗ್ರಾಮ ಪಂಚಾಯತಿಯವರು ಸೂಕ್ತ ಕ್ರಮವಹಿಸಿ ವಿಲೇವಾರಿ ಮಾಡುವ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯ ನಗರದ ಹೊಸಹಳ್ಳಿ, ಹಾಲಹಳ್ಳಿ, ಗಾಂಧಿನಗರ, ನೆಹರುನಗರ, ಗುತ್ತಲು ಬಡಾವಣೆ, ಶ್ರೀರಾಮನಗರ, ವಿನಾಯಕ ಬಡಾವಣೆ, ಅನ್ನಪೂರ್ಣೆಶ್ವರಿ ನಗರ, ಮರೀಗೌಡ ಬಡಾವಣೆ, ಕ್ಯಾತಂಗೆರೆ, ಕಲ್ಲಹಳ್ಳಿ, ಕಿರಗಂದೂರು ಬಳಿ, ಶಂಕರಪುರ, ಬೀಡಿ ಕಾಲೋನಿ, ಬೀಡಿ ಕಾಲೋನಿ, ಸೆಂಟ್ರಲ್ ಪೊಲೀಸ್ ಠಾಣೆ ಸಮೀಪ, ಸಂತೆಮಾಳ, ಪೇಟೆಬೀದಿ, ಜೈನರ ಬೀದಿ ಸೇರಿದಂತೆ ನಗರದ ಹಲವೆಡೆ ರಾಶಿ ರಾಶಿ ಕಸದ ಗುಡ್ಡೆಗಳು ಕಂಡು ಬರುತ್ತಿವೆ.
ನಗರಸಭೆ ಸೇರಿದಂತೆ ಬೇಲೂರು, ಹಳುವಾಡಿ ಬೇವಿನಹಳ್ಳಿ, ಇಂಡುವಾಳು, ಹೊಳಲು ಗ್ರಾಮ ಪಂಚಾಯಿತಿಯಿಂದ ಕಸ ವಿಲೇವಾರಿ ವಾಹನಗಳು ಮನೆ ಮನೆ ಬಾಗಿಲಿಗೆ ಬರುತ್ತವೆ. ಆದರೂ ಸಹ ನಿವಾಸಿಗಳು ಕಸ ವಿಲೇವಾರಿ ವಾಹನಗಳಿಗೆ ಕಸ ಹಾಕದೆ, ರಸ್ತೆ ಬದಿ ಸುರಿದು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಸಹ ಕಸ ವಿಲೇವಾರಿ ವಾಹನಗಳನ್ನು ಬಳಸಿಕೊಂಡರೆ ಎಲ್ಲೆಡೆ ಕಸದ ಗುಡ್ಡೆ ಹಾಕುವುದನ್ನು ತಪ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಸ ಹಾಕುವ ಜಾಗಗಳನ್ನು ಸ್ವಚ್ಚಗೊಳಿಸಿ, ಅಂತಹ ಜಾಗಗಳಲ್ಲಿ ದಂಡವಿಧಿಸುವ ಪ್ರಕಟಣೆಯ ನಾಮಫಲಕಗಳನ್ನು ಹಾಕಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ಅಧಿಕಾರಿಗಳಿ ಸೂಚನೆ ಕೊಡಬೇಕು ಎಂದು ಅವರು ಒತ್ತಾಯಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ