ಗುಜರಾತ್ ವಡೋದರಾದ ಪದ್ಮಾ ತಾಲೂಕಿನ ಮುಜ್ಜುರ ಬಳಿ ಸೇತುವೆಯೊಂದು ಕುಸಿತಗೊಂಡು ಕನಿಷ್ಠ 9 ಮಂದಿ ಮೃತಪಟ್ಟು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಘಟನೆ ನಡೆದಿದೆ.
ಇಂದು ಬೆಳಗ್ಗೆ 745 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.
In Gujarat’s Vadodara, the Gambhira Bridge connecting Anand and Vadodara collapsed.
Several vehicles, including a truck, a tanker, and cars, plunged into the rive. Rescue and relief operations are currently underway. pic.twitter.com/0FFJ4GPZua— Mohammed Zubair (@zoo_bear) July 9, 2025
“>
ಎರಡು ಟ್ರಕ್ಗಳು, ಒಂದು ಪಿಕಪ್ ವ್ಯಾನ್ ಮತ್ತು ಎರಡು ವಾಹನಗಳು ಕೆಳಗೆ ಬಿದ್ದಿದೆ ವಾಹನಗಳಿಂದ ಮೂವರನ್ನು ರಕ್ಷಿಸಲಾಗಿದ್ದು 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
45 ವರ್ಷದ ಹಳೆಯ ಸೇತುವ ಇದಾಗಿದ್ದು ಬಹಳ ಹಿಂದಿನಿಂದಲೂ ಅಪಾಯಕಾರಿ ಸ್ಥಿತಿಯಲ್ಲಿತ್ತು ಅದರ ಶಿಥಿಲಾವಸ್ಥೆಯ ಬಗ್ಗೆ ಸ್ಥಳೀಯರು ಪದೇ ಪದೇ ಸೇತುವೆ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರು ನಿರ್ಲಕ್ಷಿಸಲಾಗಿತ್ತು.




