Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜು.11 ರಿಂದ ಗ್ರೇಟ್ ಬಾಂಬೆ ಸರ್ಕಸ್ ಪ್ರದರ್ಶನ : ನಾಗೇಶ್

ಗ್ರೇಟ್ ಬಾಂಬೆ ಸರ್ಕಸ್ ಸಂಸ್ಥೆ ವತಿಯಿಂದ ಜುಲೈ ೧೧ ರಿಂದ ೩೦ ದಿನಗಳ ಕಾಲ ದಿನಕ್ಕೆ ೩ ಬಾರಿ ಸರ್ಕಸ್ ಪ್ರದರ್ಶನವನ್ನು ಮಂಡ್ಯ ನಗರದ ಗಿರಿಜಾ ಚಿತ್ರಮಂದಿರದ ಎದುರಿನ ಮೈಷುಗರ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಾಗೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟ್ ಬಾಂಬೆ ಸರ್ಕಸ್ ವತಿಯಿಂದ ಮಂಡ್ಯದಲ್ಲಿ ಇದು ಎರಡನೇ ಬಾರಿಗೆ ಪ್ರದರ್ಶನ ನೀಡಲಾಗುತ್ತಿದ್ದು, ವಾಟರ್ ಪ್ರೂಫ್ ಟೆಂಟ್‌ನಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದೇ ಪ್ರಥಮ ಬಾರಿಗೆ ಮಂಡ್ಯದಲ್ಲಿ ಇಥಿಯೋಪಿಯನ್ಸ್, ರಷ್ಯನ್, ಟೈನಿಸ್ ಹಾಗೂ ಭಾರತದ ಕಲಾವಿದರಿಂದ ಮೈ ಜುಮ್ ಎನ್ನುವ ಸಾಹಸಗಳು, ಹಾಸ್ಯಕಲೆಗಳ ಪ್ರದರ್ಶನವಾಗಲಿವೆ. ಸರ್ಕಾರದ ಹಲವು ನಿಯಮಗಳಿಂದಾಗಿ ಪ್ರಾಣಿಗಳ ಪ್ರದರ್ಶನವಿರುವುದಿಲ್ಲ ಎಂದು ಹೇಳಿದರು.

ಈ ಸರ್ಕಸ್‌ನಲ್ಲಿ ೨೫೦ಕ್ಕೂ ಹೆಚ್ಚು ಕಲಾವಿದರಿದ್ದು, ೬೦ಕ್ಕೂ ಹೆಚ್ಚು ಕಲಾವಿದರು ಹಗ್ಗದ ಮೇಲೆ ತಮ್ಮ ಕಲೆಗಳ ಪ್ರದರ್ಶನ ಮಾಡಲಿದ್ದಾರೆ. ದಿನಕ್ಕೆ ೩ ಪ್ರದರ್ಶನ ನೀಡಲಾಗುತ್ತಿದ್ದು, ಮಧ್ಯಾಹ್ನ ೧, ಸಂಜೆಯ ೪ ಹಾಗೂ ೭ ಗಂಟೆಗೆ ತಲಾ ಸುಮಾರು ೨ ಗಂಟೆ ೩೦ ನಿಮಿಷಗಳ ಕಾಲ ಪ್ರದರ್ಶನ ನಡೆಯಲಿದೆ ಎಂದರು.

ಮೂರು ರೀತಿಯ ಪ್ರವೇಶ ಶುಲ್ಕ ನಿಗಧಿ ಪಡಿಸಲಾಗಿದ್ದು, ಹತ್ತಿರದ ವೀಕ್ಷಣೆಗೆ ೩೦೦ ರೂ., ಮಧ್ಯದ ವೀಕ್ಷಣೆಗೆ ೨೦೦ರೂ ಹಾಗೂ ಹಿಂಬದಿಯಿಂದ ವೀಕ್ಷಣೆಗೆ ೧೦೦ ರೂಗಳಿರುತ್ತದೆ. ಪ್ರವೇಶ ಚೀಟಿಗಳನ್ನು ಜ಼ೊಮಾಟೊದ `ಡಿಸ್ಟ್ರಿಕ್ಟ್ ಜ಼ೊಮಾಟೊ’ನಲ್ಲಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಮಾಲೀಕ ಸಂಜೀವ್, ಲೋಕೇಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ