Sunday, November 22, 2026

ಪ್ರಾಯೋಗಿಕ ಆವೃತ್ತಿ

ಹೆಚ್.ಅಂಜನೇಯ ವಿರುದ್ದ ಹೇಳಿಕೆಗೆ ಒಳಮೀಸಲಾತಿ ಹೋರಾಟಗಾರರ ಖಂಡನೆ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಹೆಚ್.ಆಂಜನೇಯ ಅವರ ಬಗ್ಗೆ ಕುಳವ ಸಂಘಟನೆ ಕಾರ್ಯಕರ್ತರು ಹೇಳಿಕೆ ನೀಡಿರುವುದನ್ನು ಕರ್ನಾಟಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ಉಪಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿರೋಧಿಗಳು ಆಂಜನೇಯ ಅವರ ವಿರುದ್ದ ಕುತಂತ್ರ ನಡೆಸಿದ್ದು, ಸುಳ್ಳು ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಳೆದ 30ವರ್ಷಗಳಿಂದ ಹೆಚ್ ಆಂಜನೇಯ ಅವರು ಒಳ ಮೀಸಲಾತಿ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ಧಾರೆ. ಆದರೆ ಒಳಮೀಸಲಾತಿ ಜಾರಿಯು ಅಂತಿಮ ಘಟ್ಟಕ್ಕೆ ಬಂದಿರುವ ಸಂದರ್ಭದಲ್ಲಿ ಒಳಮೀಸಲಾತಿ ವಿರೋಧಿಗಳಾದ ಕೊರಚ, ಕೊರಮ ಜನಾಂಗದ ಮುಖಂಡರು ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಲ್ಪಸಂಖ್ಯೆಯಲ್ಲಿರುವ 49 ಚಿಕ್ಕ ಚಿಕ್ಕ ಜಾತಿಗಳನ್ನು ಸೇರಿಸಿ ಅಲೆಮಾರಿ ನಿಗಮವನ್ನು ಅಂದಿನ ಸಮಾಜಕಲ್ಯಾಣ ಸಚಿವ ಅಂಜನೇಯ ಸ್ಥಾಪನೆ ಮಾಡಿದ್ದರು. 2018 ರಲ್ಲಿ ಕೊರಚ-ಕೊರಮ ಜನಾಂಗ ಅಲೆಮಾರಿ ನಿಗಮವನ್ನು ಸೇರ್ಪಡೆಗೊಂಡಿದ್ದು, ಇದರಿಂದಾಗಿ ಅಲೆಮಾರಿ ನಿಗಮದ ಸಾಲ ಸೌಲಭ್ಯ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕುತ್ತಿದೆ, ಆದರೂ ನಮಗೆ 49 ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಸಭೆ ನಡೆಸಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ,ಕೊರಚ ಜನಾಂಗಕ್ಕೆ ಟಿಕೆಟ್ ಸಿಗದಿದ್ದರೆ ಅದಕ್ಕೆ ಮಾಜಿ ಸಚಿವರ ಮೇಲೆ ಆರೋಪ ಮಾಡುವುದು  ಸರಿಯಲ್ಲ, ಅವರ ಆರೋಪ ನಿರಾಧಾರವಾಗಿದ್ದು ಶೋಷಿತರ ಪರವಾಗಿ ಧ್ವನಿಯಾಗಿರುವ ನಾಯಕರ ಬಗ್ಗೆ ಪದೇ ಪದೇ ಕ್ಯಾತೆ ತೆಗೆದು, ಒಳಮೀಸಲಾತಿ ಜಾರಿಗೆ ಅಡ್ಡ ಬಂದರೆ, ಮಾದಿಗ ಸಂಘಟನೆಗಳು ಸಹಿಸುವುದಿಲ್ಲ ಮುಖಂಡರಾದ ಹೆಚ್ ಎಂ ಪುಟ್ಟರಾಜು, ಬಿ ಬಿ ಕಾವಲ್ ಕಾಂತರಾಜು, ಹನುಮಯ್ಯ, ಚಾಮನಹಳ್ಳಿ ಮಂಜು, ವಕೀಲರಾದ ಕೆಂಪಯ್ಯ, ಸತೀಶ್, ಅಲ್ಲಾಪಟ್ಣ ಕುಮಾರ್, ಶಿವಕುಮಾರ್  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ