Friday, November 20, 2026

ಪ್ರಾಯೋಗಿಕ ಆವೃತ್ತಿ

ಜನತಾದರ್ಶನದಿಂದ ಸಾವಿರಾರು ಜನರಿಗೆ ಉಪಯೋಗ : ರವಿಕುಮಾರ್

ಜನರ ಮನೆ ಬಾಗಿಲಿಗೆ ಅಧಿಕಾರಿಗಳನ್ನು ಕರೆತಂದು ಅವರ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜನತಾ ದರ್ಶನದಿಂದ ಸಾವಿರಾರು ಜನರಿಗೆ ಉಪಯೋಗವಾಗಿದೆ ಎಂದು ಶಾಸಕ ಗಣಿಗ ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಿಮ್ಮ ಊರಿಗೆ ನಿಮ್ಮ ಶಾಸಕರು’ ಎಂಬ ವಿನೂತನ ಯೋಜನೆಯೊಂದಿಗೆ ಶಾಸಕ ರವಿಕುಮಾರ್ ಬೂದನೂರು, ಬಸರಾಳು,ಮುತ್ತೇಗೆರೆ, ಕೆರಗೋಡು, ಕೀಲಾರ, ಜೋಡಿ ಹೊಡಾಘಟ್ಟ,ಉಪ್ಪರಕನಹಳ್ಳಿ, ಕಂಬದಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾದ “ಜನತಾ ದರ್ಶನ” ಇಂದು ಮಂಡ್ಯ ತಾಲ್ಲೂಕಿನ ಕನ್ನಲಿ ಗ್ರಾಮದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರವಿಕುಮಾರ್ ಮಾತನಾಡಿ,ಈಗಾಗಲೇ ಬಿ.ಗೌಡಗೆರೆ ಹಾಗೂ ಉಚ್ಚಲಗೆರೆ ರಸ್ತೆ ಅಭಿವೃದ್ಧಿಗೆ 2.80 ಕೋಟಿ ಹಣ ಬಿಡುಗಡೆಯಾಗಿದ್ದು, ಶೀಘ್ರವಾಗಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುತ್ತೇನೆ. ಕನ್ನಲಿಯಲ್ಲಿ ಮೂರು ರಸ್ತೆಗಳಾಗಿವೆ. ನಾನು ಶಾಸಕನಾದ ನಂತರದ ಕನ್ನಲಿ ಗ್ರಾಮ ಯಾವ ರೂಪದಲ್ಲಿದೆ ಎಂಬುದನ್ನು ನೋಡಿದರೆ ಗೊತ್ತಾಗುತ್ತದೆ. ಎಸ್’ಸಿಪಿ ಯೋಜನೆಯಡಿ 50 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಉಚ್ಚಲಗೆರೆ ಗ್ರಾಮದಲ್ಲಿ 50 ಲಕ್ಷ ರೂ ಎಸ್ ಸಿಪಿ ಅನುದಾನ ನೀಡಿದ್ದೇನೆ. 5 ಲಕ್ಷ ವಿಶೇಷ ಅನುದಾನ ನೀಡಿದ್ದೇನೆ.ಕನ್ನಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 10-15 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.ಹಲವು ಕಾಮಗಾರಿಗಳು ನಡೆಯುತ್ತಿವೆ ಎಂದರು.

ನಮ್ಮ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ನೀಡುವ ಮೂಲಕ ಅವರ ಸಬಲೀಕರಣ ಮಾಡುತ್ತಿದೆ‌.ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಜನರ ಅಭಿವೃದ್ಧಿಗೆ ಮುಂದಾಗಿದೆ ಎಂದರು.

ಇಂದಿನ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ವಿವಿಧ ಸರ್ಕಾರಿ ಸೇವೆಗಳ ಸುಮಾರು 200ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದರು ಮತ್ತು ಕೆಲವು ಅರ್ಜಿಗಳನ್ನು ಇಲಾಖಾ ಅಧಿಕಾರಿಗಳಿಗೆ ಹಸ್ತಾಂತರಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.

ಗ್ರಾಮ ಪಂಚಾಯತ್ ಆವರಣ ದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಿ ಅವಶ್ಯಕತೆ ಇರುವವರಿಗೆ ಉಚಿತ ಕನ್ನಡಕ ವಿತರಿಸಿ ನಂತರ ಪಂಚಾಯಿತಿ ಇ-ಸ್ವತ್ತುಗಳ ವಿತರಣೆ, ಗ್ರಾಮದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಶಾಸ್ತ್ರ, ಸೇರಿದಂತೆ ಸರ್ಕಾರದ ಸೇವೆಗಳನ್ನು ಸಾರ್ವಜನಿಕರಿಗೆ ನೇರವಾಗಿ‌ ತಲುಪಿಸುವ ಮುಖಾಂತರ ಶಾಸಕ ಗಣಿಗ ರವಿಕುಮಾರ್ ಯಶಸ್ವೀ ಜನತಾ ದರ್ಶನವನ್ನು ನಡೆಸಿಕೊಟ್ಟರು ಎಂದ ಗ್ರಾಮಸ್ಥರು ಅವರಿಗೆ ಹಾರ ಹಾಕಿ ಅಭಿನಂದಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮನ್ಮುಲ್ ಅಧ್ಯಕ್ಷ ಯು‌.ಸಿ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಪಿ.ರುದ್ರಪ್ಪ, ವಕೀಲ ಕನ್ನಲಿ ಕೆಂಪಯ್ಯ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ