ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಣ್ಣೆಹೊಳೆಕೊಪ್ಪಲು ಗ್ರಾಮ ಮತ್ತು ಹಾಗನಹಳ್ಳಿ ಗ್ರಾಮದ ಪರಿಮಿತಿಯಲ್ಲಿ 10.55 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.
6.25 ಕೋಟಿ ರೂಪಾಯಿ ವೆಚ್ಚದಲ್ಲಿ ಎಣ್ಣೆಹೊಳೆಕೊಪ್ಪಲು ಗ್ರಾಮದ ಪರಿಮಿತಿಯಲ್ಲಿ ವಿವಿಧ ಕಾಮಗಾರಿ ಹಾಗೂ 4.30 ಕೋಟಿ ರೂ. ವೆಚ್ಚದಲ್ಲಿ ಅರಳಕುಪ್ಪೆ – ಹಾಗನಹಳ್ಳಿ ನಡುವೆ ಇರುವ ಬೇಬಿ ಕೆರೆ ಕೋಡಿ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಅರಳಕುಪ್ಪೆ – ಹಾಗನಹಳ್ಳಿ ನಡುವೆ ಇರುವ ಬೇಬಿ ಕೆರೆ ಸೇತುವೆ ಕುಸಿದಿತ್ತು , ಸರ್ಕಾರ ಮೈನರ್ ಇರಿಗೇಷನ್ ನಲ್ಲಿ ಅನುದಾನ ನೀಡಿದೆ ಎಂದರು. ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಪ್ರವಾಹದಿಂದ ಹಲವಾರು ಸಮಸ್ಯೆ ಉಂಟಾಗಿ ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗೆ ಪ್ರಾರಂಭ ಮಾಡಿದ್ದೇವೆ ಎಂದರು.
ರಸಗೊಬ್ಬರದ ಕೊರತೆ ನೀಗಿಸಲು ಈಗಾಗಲೇ ಕೃಷಿ ಸಚಿವರ ಬಳಿ ಚರ್ಚಿಸಿದ್ದೇನೆ, ಸಚಿವರು ಅಧಿಕಾರಿಗಳ ಬಳಿ ಮಾಹಿತಿ ಪಡೆದು ಶೀಘ್ರದಲ್ಲಿ ಸರಿ ಪಡಿಸುವ ಭರವಸೆ ನೀಡಿದ್ದಾರೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ಎ ಎಲ್ ಕೆಂಪೂಗೌಡ, ಕಾರ್ಯಕರ್ತರು, ಗ್ರಾಮದ ಮುಖಂಡರುಹಾಜರಿದ್ದರು.




