ಮಂಢ್ಯನಗರದ ಸ್ವರ್ಣಸಂದ್ರ ವೀರಯೋಧ ಸುದೀರ್ ಮತ್ತು ಶರತ್ ರುದ್ರಭೂಮಿ ಉದ್ಯಾನವದಲ್ಲಿ ಜೈ ಕರ್ನಾಟಕ ಪರಿಷತ್ತು ಮತ್ತು ನಿವೃತ ಸೈನಿಕರೊಡನೆ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಶನಿವಾರ ಸಂಜೆ ಅಚರಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ವೀರ ಯೋಧರ ರುದ್ರಭೂಮಿಗೆ ಪುಷ್ಪ ನಮನಸಲ್ಲಿದ ಜೈ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಮಾತನಾಡಿ ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುವ ಕಾರ್ಗಿಲ್ ವಿಜಯ್ ದಿವಸ್ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಮಹತ್ವದ ದಿನವಾಗಿದೆ. ಇದು 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ಅಚಲ ದೃಢಸಂಕಲ್ಪವನ್ನು ಸ್ಮರಿಸುವಂತ ಈ ದಿನದಂದು, ನಮ್ಮ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಧೀರ ಸೈನಿಕರಿಗೆ ನಾವು ಗೌರವ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ವೀರರನ್ನು ಗೌರವಿಸಲು ಮತ್ತು ದೇಶಭಕ್ತಿ ಮತ್ತು ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಗೌರವವನ್ನು ಮೂಡಿಸಲು ಪರಿಪೂರ್ಣ ಪದಗಳಿಂದ ನಿಮ್ಮನ್ನು ಸಜ್ಜುಗೊಳಿಸುವುದು ನಮ್ಮ ಗುರಿಯಾಗಿದೆ. ನಮ್ಮ ಕಾರ್ಗಿಲ್ ವೀರರ ತ್ಯಾಗಗಳನ್ನು ಎಂದಿಗೂ ಮರೆಯದಂತೆ ನೆನಪಿಸಿ ಕೊಳೋಣ.1999 ರಲ್ಲಿ 500 ಕ್ಕೂ ಹೆಚ್ಚು ಕುಟುಂಬಗಳ ನೋವು ಮರೆಯಲು ಸಾಧ್ಯವಿಲ್ಲ. ಹಾಗಾಗಿ ನಮಗಾಗಿ ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದ ಯೋಧರ ಕುಟುಂಬಗಳನ್ನು ನೆನೆದು ಸ್ಮರಿಸೋಣ. ಭಾರತದ ಪ್ರತಿಯೊಬ್ಬ ಪ್ರಜೆಯು ನಮ್ಮದಿ ಜೀವನ ಮಾಡತ್ತಿದ್ದರೆ ಅದಕ್ಕೆ ಕಾರಣ ನಮ್ಮ ಗಡಿ ಕಾಯುವ ಯೋಧರೆ ಕಾರಣ ಅವರೇ ನಿಜವಾದ ಹಿರೋಗಳು ಎಂದರು.
ಈ ಕಾರ್ಯಕ್ರಮದಲ್ಲಿ ನಿವೃತಾ ಸೈನಿಕರಾದ ಪಿ.ಗಜೇಂದ್ರ ,ಶ್ರೀನಿವಾಸ್, ರಾಜಣ್ಣ ಇವರುಗಳನ್ನು ಜೈ ಕರ್ನಾಟಕ ಪರಿಷತ್ತು ವತಿಯಿಂದ ಸನ್ಮಾನಿಸಿ.ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸೈನಿಕರ ಸಂಘದ ವತಿಯಿಂದ ಸೈನಿಕರ ಮಕ್ಕಳನ್ನು ಗುರುತಿಸಿ ಎಸ್ ಎಸ್ ಎಲ್ ಸಿ.ಮತ್ತು ಪಿ ಯು ಸಿ ಯಲ್ಲಿ ಅತಿಹೆಚ್ಚು ಅಂಕದಿಂದ ಉತೀರ್ಣರಾದ ಹತ್ತು ವಿದ್ಯಾರ್ಥಿಗಳಿಗೆ ಗೌರವ ಧನ ಒಬ್ಬರಿಗೆ 3000 ರೂಗಳಂತೆ ಹತ್ತು ವಿದ್ಯಾರ್ಥಿಗಳಿಗೆ 30000/- ರೂಗಳನ್ನು ನೀಡಲಾಯಿತು.
ನಿವೃತ ಸೈನಿಕರ ಸಂಘದ ಅಧ್ಯಕ್ಷರಾದ.ಮಲ್ಲರಾಜಣ್ಣ, ನಾಗೇಶ್. ಮಂಡ್ಯ ಜಿಲ್ಲೆಯ ನಿವೃತ ಸೈನಿಕರು.ಜೈ ಕರ್ನಾಟಕ ಪರಿಷತ್ತು ಪಧಾಧಿಕಾರಿಗಳಾದ ತನುಜ ಕೆಂಪೇಗೌಡ, ಮಂಜುಳ ದೇವರಾಜ್ ,ಪದ್ಮರವಿ,ವರಲಕ್ಷ್ಮಿ, ಪುಟ್ಟಸ್ವಾಮಣ್ಣ ಬಿ. ನಾರಾಯಣಸ್ವಾಮಿ, ವಿನುಕುಮಾರ್, ರಾಜು, ಬಿ.ಡಿ.ಪುಟ್ಟಸ್ವಾಮಣ್ಣ, ಪುಟ್ಟೇಗೌಡ, ಶ್ರೀಹರಿ. ಕೃಷ್ಣ ಇತರರು ಭಾಗವಹಿಸಿದರು




