ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿದ ಬೆನ್ನಲ್ಲೇ, ಕಾನೂನನ್ನು ಎಲ್ಲರೂ ಗೌರವಿಸಬೇಕೆಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ನಾರಾಯಣ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನನ್ನು ಎಲ್ಲರೂ ಗೌರವಿಸಬೇಕು. ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡೋಣ ಎಂದು ಹೇಳಿದರು.
ತಡೆಯುವುದಕ್ಕೆ ನಾವ್ಯಾರು
ಡಿ.ಕೆ.ಶಿವಕುಮಾರ್ ಬಿಜೆಪಿ ಪಕ್ಷಕ್ಕೆ ಬಂದರೆ ತಡೆಯುವುದಕ್ಕೆ ನಾವ್ಯಾರು. ಆದರೆ ಅವರು ಪಕ್ಷಕ್ಕೆ ಬರುತ್ತಾರೆ ಎನ್ನುವುದು ಅನುಮಾನ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಅವರು ಆ ಪಕ್ಷಕ್ಕೆ ನಿಷ್ಠೆಯಾಗಿದ್ದಾರೆ. ಆದ್ದರಿಂದ ನಾವ್ಯಾಕೆ ಅವರಿಗೆ ಅಗೌರವ ಸೂಚಿಸಬೇಕು. ಮಸಿ ಬಳಿಯುವಂತ ಕೆಲಸ ನಾವ್ಯಾಕೆ ಮಾಡಬೇಕು. ಆ ಪಕ್ಷದಲ್ಲಿಯೇ ಗುದ್ದಾಟ ನಡಿತಿದೆ. ಯಾವ ಮಟ್ಟಕ್ಕೆ ಸರ್ಕಾರ ಹೋಗಲಿದೆ ಎನ್ನುವುದು ಕಾದುನೋಡೋಣ. ಅವರವರೇ ಆ ಸರ್ಕಾರಕ್ಕೆ ದಾರಿ ತೋರಿಸುತ್ತಾರೆ ಎಂದರು.
ಅಪನಂಬಿಕೆ ದೂರಾಗಬೇಕು
ಧರ್ಮಸ್ಥಳ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಪವಿತ್ರ ಸ್ಥಳದ ಮೇಲೆ ಇರುವ ಅಪನಂಬಿಕೆ ದೂರಾಗಬೇಕು. ಕೆಲ ಸಂಘಟನೆಗಳು ನಮ್ಮ ನಂಬಿಕೆ ಕೇಂದ್ರದ ಬಗ್ಗೆ ಮಾತನಾಡುವ ಆಗಿದೆ. ಇದಕ್ಕೆ ಪೂರಕವಾಗಿ ಕುಮ್ಮಕ್ಕು ಕೊಡುವವರು ಇದ್ದಾರೆ. ಅಗ್ನಿ ಪರೀಕ್ಷೆ ಎದುರಿಸಲು ಅವರು ಸಿದ್ಧರಿದ್ದಾರೆ. ಬೇಗ ತನಿಖೆ ನಡೆದು ಸತ್ಯ ಹೊರಬರಲಿ ಎಂದರು.




