Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಹಿಳೆಯರು ಪಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು : ನಾರಾಯಣ್

ಮಹಿಳೆಯರಿಗೆ ಸಮಾನತೆ ಇದ್ದರು ಅತ್ಯಾಚಾರ, ದೌರ್ಜನ್ಯ ಇತರೆ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಘಟನೆಗಳನ್ನು ತಡೆಗಟ್ಟಲು ಮಹಿಳೆಯರು ಸಂಘಟಿತರಾಗಿ ಧೈರ್ಯದಿಂದ ಅನ್ಯಾಯ ನಡೆದಾಗ ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಸಲಹೆ ನೀಡಿದರು.

ಮಂಡ್ಯ ನಗರದ ಜೈ ಕರ್ನಾಟಕ ಪರಿಷತ್ತಿನ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಮಹಿಳೆಯರು ಸಂಘಟಿತರಾಗಬೇಕು, ಸ್ವಾವಲಂಬಿಗಳಾಗಬೇಕು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು. ಪರಿಷತ್ತಿನ ಇಂತಹ ಸಭೆಗಳಲ್ಲಿ ಕಾನೂನು ಜ್ಞಾನವನ್ನು ಪಡೆದು ಅನ್ಯಾಯದ ವಿರುದ್ದ ಹೋರಾಡಬೇಕಿದೆ. ನಮ್ಮ ಸಂಘಟನೆಯು ಬಹಳ ಬಲವಾಗಿ ಬೆಳೆಯುತ್ತಿದೆ. ಅದಕ್ಕೆ ಕಾರಣ ನಮ್ಮ ಪರಿಷತ್ತಿನ ಪ್ರತಿ ಸದಸ್ಯರ ಶ್ರಮ ಇದೆ. ಇದೇ ರೀತಿ ನಿಮ್ಮ ಶಾಖೆಗಳನ್ನು ಬಲಪಡಿಸಿಕೊಳ್ಳಿ ಎಂದು ಹೇಳಿದರು.
ನೆಲದನಿ ಸಂಸ್ಥೆ ಸಂಘಟಕ ಎಂ.ಸಿ.ಲಂಕೇಶ್ ಮಾತನಾಡಿ, ಪ್ರತಿಯೊಬ್ಬರೂ ಕುವೆಂಪುರವರ ಆದರ್ಶಗಳನ್ನು ಮೈಗೂಡಿಸಿಕೋಳ್ಳಬೇಕು, ಜಾತಿ ಬೇದ ಬಿಟ್ಟು ಸಮಾನತೆಯಿಂದ ಬದುಕಬೇಕು. ಇಂತಹ ವಿಷಯಗಳಲ್ಲಿ ಜೈ ಕರ್ನಾಟಕ ಪರಿಷತ್ತು ಮಂಡ್ಯದಲ್ಲಿ ಮುಂಚೂಣಿಯಲ್ಲಿ ಇರುವ ಸಂಘಟನೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ವಾರ್ಡಗಳಲ್ಲಿ, ಹಳ್ಳಿಗಳಲ್ಲಿ, ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿ ಸಮ್ಮೇಳನದ ಯಶಸ್ವಿಗೆ ಜೈ ಕರ್ನಾಟಕ ಪರಿಷತ್ತು ಕೈಜೋಡಿಸಿದೆ ಎಂದು ಹೇಳಿದರು.

ಆ.೩ರಂದು ಭಾನುವಾರ ಸಂಜೆ `ಆಳಿದ ಮಹಾಸ್ವಾಮಿಗಳು’ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದು, ಎಲ್ಲರೂ ತಪ್ಪದೇ ಆಗಮಿಸುವಂತೆ ಮನವಿ ಮಾಡಿದರು.

ರೈತ ಹೋರಾಟಗಾರರಾದ ಸುನಂದ ಜಯರಾಮು ಮಾತನಾಡಿ, ಮಂಡ್ಯದಲ್ಲಿ ಹಲವಾರು ರೈತಪರ ಹೋರಾಟಗಳನ್ನು ನಡೆಸುತ್ತಿದ್ದೇವೆ. ಎಲ್ಲಾ ಹೋರಾಟಗಳಿಗೂ ನಮ್ಮ ಜೊತೆ ಜೈ ಕರ್ನಾಟಕ ಪರಿಷತ್ತು ಸದಾ ಬೆಂಬಲವನ್ನು ನೀಡುತ್ತಾ ಬಂದಿದೆ. ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ ಎಂದು ಹೇಳಿದರು.

ಆ.೩ರಂದು ಭಾನುವಾರ ಸಂಜೆ ೫ ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಆಧಾರಿತ `ಆಳಿದ ಮಹಾಸ್ವಾಮಿಗಳು’ ನಾಟಕ ಪ್ರದರ್ಶನ ಆಯೋಜಿಸಿದ್ದು, ಎಲ್ಲರೂ ಕುಟುಂಬ ಸಮೇತರಾಗಿ ಬಂದು ನಾಟಕವನ್ನು ನೋಡಬೇಕು. ಈ ನಾಡಿಗೆ ನಾಲ್ವಡಿಯವರು ಕೊಟ್ಟ ಸಾಧನೆಗಳನ್ನು ಪುಸ್ತಕದಲ್ಲಿ ಓದುತ್ತೇವೆ. ಆದರೆ ಈ ನಾಟಕವನ್ನು ಮಕ್ಕಳಿಗೂ ತೋರಿಸಿ ಸಾಧನೆಯ ಸತ್ಯಗಳನ್ನು ತಿಳಿಸಿ ಎಂದು ಹೇಳಿ ನಾಟಕ ಕರಪತ್ರಗಳನ್ನು ಸಭೆಯಲ್ಲಿ ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಿ.ಪುಟ್ಟಸ್ವಾಮಿ ಮಾತನಾಡಿ, ಒಗ್ಗಟಿನಲ್ಲಿ ಬಲವಿದೆ ಆ ಒಗ್ಗಟ್ಟು ಜೈ ಕರ್ನಾಟಕ ಪರಿಷತ್ತಿನಲ್ಲಿದೆ. ಒಗ್ಗೂಡಿ ಒಂದೇ ಕುಟುಂಬದವರ ರೀತಿ ಮುಂದೆ ಸಾಗೋಣ ಎಂದು ಹೇಳಿದರು
ಜೈ ಕರ್ನಾಟಕ ಪರಿಷತ್ತಿನ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವವರಿಗೆ ಉಡುಗೊರೆಗಳನ್ನು ಶಿಸ್ತಿನ ಸಮಿತಿ ನೀಡಲಾಯಿತು. ಮೊದಲನೆ ಉಡುಗೊರೆ ೩೩ನೇ ವಾರ್ಡ್ ಮಹಿಳಾ ಶಾಖಾಧ್ಯಕ್ಷೆ ಪುಟ್ಟಮ್ಮ, ದ್ವಿತೀಯ ಉಡುಗೊರೆ ಇಂದಿರಾ ಕಾಲೋನಿ ಮಹಿಳಾ ಶಾಖಾಧ್ಯಕ್ಷೆ ತನುಜ ಕೆಂಪೇಗೌಡ, ತೃತೀಯ ಉಡುಗೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ ಮಹಿಳಾ ಶಾಖಾಧ್ಯಕ್ಷೆ ಮಂಜುಳ ದೇವರಾಜು ಅವರಿಗೆ ನೀಡಲಾಯಿತು.

ಸಭೆಯಲ್ಲಿ ಸುಶೀಲಮ್ಮ ಕೆಂಪೇಗೌಡ, ಸವಿತಾ ಜಯರಾಮ್, ಸುಜಾತ ಸಿದ್ದಯ್ಯ, ಕೆ.ಎಂ.ಸತೀಶ್.ಬಿ .ಡಿ.ಪುಟ್ಟಸ್ವಾಮಿ. ಎಂ.ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ