ಸಮಾಜ ಸೇವಕ ಹಾಗೂ ಉದ್ಯಮಿ ಜಫ್ರುಲ್ಲಾಖಾನ್ ಅವರ ಹುಟ್ಟುಹಬ್ಬವನ್ನು ಮಂಡ್ಯ ನಗರದ ಸ್ವರ್ಣಸಂದ್ರದ ಪ್ರೇರಣಾ ಅಂಧ ಮತ್ತು ವಿಶೇಷ ಚೇತನರ ವಸತಿ ಶಾಲೆಯಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿತೈಷಿ ಬಳಗದ ಅಧ್ಯಕ್ಷ ಕೆ.ಎನ್.ನವೀನ್ಕುಮಾರ್ ನೇತೃತ್ವದಲ್ಲಿ ವಸತಿ ಶಾಲೆಯ ನೂರಾರು ಮಕ್ಕಳಿಗೆ ವಿಶೇಷ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳು ಜಫ್ರುಲ್ಲಾಖಾನ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿತೈಷಿ ಬಳಗದ ಅಧ್ಯಕ್ಷ ಕೆ.ಎನ್.ನವೀನ್ಕುಮಾರ್, ಸಮಾಜ ಸೇವಕ ಜಫ್ರುಲ್ಲಾಖಾನ್ ಅವರ ಹುಟ್ಟುಹಬ್ಬವನ್ನು ಆರ್ಥಪೂರ್ಣವಾಗಿ ಆಚರಿಸಲು ಪ್ರೇರಣ ವಸತಿ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಆಯೋಜಿಸಿದ್ದೇವೆ. ಈ ಎಲ್ಲಾ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಿ, ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ಜಫ್ರುಲ್ಲಾ ಅವರು ಸಾಮಾನ್ಯ ಕುಟುಂಬದಿಂದ ಜನಿಸಿ, ಆಗರ್ಭ ಶ್ರೀಮಂತರಾಗಿದ್ದಾರೆ. ದುಬೈನಲ್ಲಿ ನೆಲೆಸಿದ್ದರೂ ತಮ್ಮ ಹುಟ್ಟೂರು ಮತ್ತು ರಾಜ್ಯವನ್ನು ಮರೆಯದೇ ಇಲ್ಲಿ ಹಲವು ಸಮಾಜಿಕ ಕೆಲಸಗಳನ್ನು ಸದಾ ಮಾಡುತ್ತಾ ಈ ಭಾಗದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಬಣ್ಣಿಸಿದರು.
ಕಳೆದ ೩೦ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿ, ಬಡ ರೋಗಿಗಳಿಗೆ ಆರ್ಥಿಕ ವೆಚ್ಚ, ಸಾಂಸ್ಕೃತಿಕ, ಸಾಹಿತ್ಯಾತ್ಮಕ ಕೆಲಸಗಳಿಗೆ ಪೋಷಣೆ, ಕೊರೋನಾ ಸಂದರ್ಭದಲ್ಲಿ ಸಾವಿರಾರು ಕುಟುಂಬಕ್ಕೆ ಫುಡ್ಕಿಟ್, ಔಷಧಿ ವ್ಯವಸ್ಥೆ ಮಾಡಿದ್ದರು. ಜೊತೆಗೆ ಹುಟ್ಟೂರನ್ನು ಮರೆಯದೇ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದಾರೆಂದು ತಿಳಿಸಿದರು.
ಪ್ರೇರಣಾ ವಸತಿ ಶಾಲೆಯ ಮುಖ್ಯಸ್ಥ ರವಿಕುಮಾರ್ ಮಾತನಾಡಿ, ಸಮಾಜ ಸೇವಕ ಜಫ್ರುಲ್ಲಾಖಾನ್ ಮಂಡ್ಯದಲ್ಲಿ ಹುಟ್ಟಿ, ದುಬೈನಲ್ಲಿ ಖ್ಯಾತ ಉದ್ಯಮಿಯಾಗಿದ್ದಾರೆ. ಆದರೂ ಹುಟ್ಟೂರನ್ನು ಮರೆಯದೇ ನಿರಂತರ ಸೇವೆ ಮಾಡುತ್ತಾ ಈ ಭಾಗದ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇಂತಹ ನಾಯಕರ ಸಮಾಜ ಸೇವೆಯಿಂದ ಅನೇಕ ಟ್ರಸ್ಟ್ಗಳು, ನಿರಾಶ್ರಿತರಿಗೆ ಸಹಾಯವಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಿತೈಷಿ ಬಳಗದ ಆರ್.ಎನ್.ನಂಜುಂಡಸ್ವಾಮಿ, ವೆಂಕಟೇಶ್, ಜಿ.ಟಿ.ಪ್ರವೀಣ್ಕುಮಾರ್, ಅಜಯ್ಕುಮಾರ್ ಇನ್ನಿತರರಿದ್ದರು.




