Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಶಾಲಾ ಕೊಠಡಿ ನಿರ್ಮಿಸಿ ನುಡಿದಂತೆ ನಡೆದ ಶಾಸಕ ರವಿಕುಮಾರ್

ಮಂಡ್ಯ ನಗರದಲ್ಲಿ ಮನೆ ಮನೆಗೆ ನಿಮ್ಮ ಶಾಸಕರು ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆ ಆಲಿಸಲು ತೆರಳಿದ್ದ ಸಂದರ್ಭದಲ್ಲಿ ಗುತ್ತಲು ಭಾಗದ ನಿವಾಸಿಗಳು ಹಾಗೂ ದಿ.ಮುನಾವರ್ ಖಾನ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಕಟ್ಟಡ ಶಿಥಿಲಗೊಂಡಿದ್ದು ನೂತನ ಕಟ್ಟದ ನಿರ್ಮಿಸಿಕೊಡುವಂತೆ ಶಾಸಕರಲ್ಲಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಶಾಸಕರು ಶಾಲಾ ಕೊಠಡಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದರು.

ಸ್ಥಳೀಯ ನಿವಾಸಿಗಳ ಮನವಿಯಂತೆ ಇಂದು 28 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿಗಳನ್ನು ಶಾಸಕ ರವಿಕುಮಾರ್ ಉದ್ಘಾಟಿಸಿ, ಸ್ಥಳೀಯ ನಿವಾಸಿಗಳು ಸಲ್ಲಿಸಿದ ಅಭಿನಂದನೆಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ನಯೀಮ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್, ಕಾಂಗ್ರೆಸ್ ಮುಖಂಡರಾದ ಮುನಾವರ್ ಪಾಷ, ಇದ್ರಿಶ್ ಖಾನ್, ಶಿವನಂಜು, ಮುಸ್ಲಿಂ ಮುಖಂಡರು, ಮುಖ್ಯ ಶಿಕ್ಷಕರಾದ ರೇಷ್ಮ ಭಾನು ಹಾಗೂ ಶಾಲಾ ಶಿಕ್ಷಕರು, ಮುಖಂಡರುಗಳು ಹಾಜರಿದ್ದರು…

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ