ನಾಗಮಂಗಲ ಪಟ್ಟಣದಲ್ಲಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡುತ್ತಿರುವುದು ನಮ್ಮ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿಗೂ ಮಾದರಿಯಾಗಬೇಕು ಹಾಗೂ ಪ್ರೇರಣೆಯಾಗಬೇಕು ಎಂದು ಮಂಡ್ಯ ಜಿಲ್ಲಾ ಪೋಲಿಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ (ಐಪಿಎಸ್) ಅಭಿಪ್ರಾಯಪಟ್ಟರು.
ನಾಗಮಂಗಲ ನಗರದ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯವರೊಂದಿಗೆ ಮಾತನಾಡಿದ ಅವರು ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡುವ ಯೋಚನೆ ಹಾಗೂ ಯೋಜನೆ ತುಂಬಾ ಚೆನ್ನಾಗಿದೆ. ನಗರದ 23 ವಾರ್ಡ್ ಗಳಿಂದ 15 ಕ್ಕೂ ಹೆಚ್ಚು ಗಣಪತಿ ಸಂಘಗಳು ಒಪ್ಪಿರುವ ಜೊತೆಯಲ್ಲಿ ಬಾಕಿ ಉಳಿದಿರುವ ಗಣಪತಿಗಳು ಸಹ ಸಾಮೂಹಿಕವಾಗಿ ಬಿಡಲು ಮನಸ್ಸು ಮಾಡಬೇಕಿದೆ. ಈ ರೀತಿ ಸಮೂಹಿಕವಾಗಿ ವಿಸರ್ಜನೆ ಮಾಡುವ ಮೂಲಕ ಬೇರೆಯವರಿಗೆ ಪ್ರೇರಣೆಯಾಗಬೇಕೆಂದರು.
ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಗಣಪತಿ ಹಬ್ಬವಾದ 9 ನೇ ದಿನವಾದ ಸೆ.
04 ಗುರುವಾರ ಪಟ್ಟಣದಲ್ಲಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡಲು ಸಮಿತಿಯಿಂದ ನಿರ್ಧರಿಸಲಾಗಿದೆ. ನಾಗಮಂಗಲದಲ್ಲಿ 20 ಕ್ಕೂ ಹೆಚ್ಚು ಗಣಪತಿಗಳನ್ನು ಸಾಮೂಹಿಕವಾಗಿ
ವಿಸರ್ಜನೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎ.ಎಸ್.ಪಿ. ತಿಮ್ಮಯ್ಯ ಹಾಗೂ ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




