Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ; ಪರಿಶೀಲನೆ

ಮಳವಳ್ಳಿ ತಾಲ್ಲೂಕು ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿ ಸ್ವೀಕರಿಸಿ ನಿಗದಿತ ಅವಧಿಯಲ್ಲಿ‌ ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಎಂದು ಡಾ. ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು‌.
 ತಾಲೂಕು ಕಚೇರಿಯ ಟಪಾಲು ಶಾಖೆಗೆ ಭೇಟಿ ನೀಡಿ ಸ್ವೀಕೃತವಾಗಿದ್ದ ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಿದರು ಪ್ರತಿಯೊಂದು ಅರ್ಜಿಗಳನ್ನು ಇ-ಆಫೀಸ್ ತಂತ್ರಾಂಶದ ಮೂಲಕವೇ ರವಾನಿಸುತ್ತಿರುವ ಬಗ್ಗೆ ಪರಿಶೀಲಿಸಿಕೊಂಡು, ಯಾವುದೇ ಅರ್ಜಿಗಳು ಭೌತಿಕವಾಗಿ ಮಂಡನೆಯಾಗದಂತೆ ಕ್ರಮವಹಿಸುವಂತೆ ಸೂಚಿಸಿದರು.
ಅಭಿಲೇಖಾಯ ಶಾಖೆಗೆ ಭೇಟಿ ನೀಡಿ, ಶಾಖೆಯಲ್ಲಿ ಎ, ಬಿ, ಸಿ, ಡಿ ಹಾಗೂ ಇ ವರ್ಗವಾರು ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಬಗ್ಗೆ, ಕಾಲಕಾಲಕ್ಕೆ ಕಡತಗಳನ್ನು ವಿಲೇವಾರಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿದರು.
ಅಭಿಲೇಖಾಲಯ ಶಾಖೆಯಲ್ಲಿ ಸ್ವೀಕೃತವಾದ ಅರ್ಜಿಗಳ ಬಗ್ಗೆ ಮಾಹಿತಿ ಪಡೆದು, ಯಾವುದೇ ಕಾರಣವನ್ನೂ ನೀಡದೇ ಭೌತಿಕವಾಗಿ ದಾಖಲೆಗಳನ್ನು ವಿತರಿಸದಂತೆ ಸೂಚನೆ ನೀಡಿದರು. ತಂತ್ರಾಂಶದ ಮೂಲಕವೇ ಡಿಜಿಟಲ್ ದಾಖಲೆ ನೀಡಲು ಸೂಚಿಸಿದರು.
.ಕಛೇರಿಯ ಎಲ್ಲಾ ಶಾಖೆಗಳಿಗೂ ಭೇಟಿ ನೀಡಿದ ಅವರು ಪ್ರತೀ ಅರ್ಜಿಗಳನ್ನು ಹಾಗೂ ಕಡತಗಳನ್ನು ಇ-ಆಫೀಸ್ ನಲ್ಲಿಯೇ ಮಂಡಿಸಬೇಕು. ಜಿಲ್ಲಾಧಿಕಾರಿಗಳ ಕಛೇರಿಯ ಹಾಗೂ ಮೇಲ್ಮಟ್ಟದ ಯಾವುದೇ ಕಛೇರಿಗಳಿಂದ ಕೋರುವ ಯಾವುದೇ ಮಾಹಿತಿಗೆ ವಿಳಂಬ ಮಾಡದೇ ಮಾಹಿತಿ ನೀಡಲು ಸೂಚಿಸಿದರು.
ವಂಶವೃಕ್ಷ ಮತ್ತು ಆರ್’ಟಿಸಿ ವಿತರಣೆ ಮಾಡುವಲ್ಲಿ ಯಾವುದೇ ವಿಳಂಬ ಮಾಡದೇ ತ್ವರಿತವಾಗಿ ವಿತರಿಸುವಂತೆ ಸಂಬಂಧಪಟ್ಟ  ಶಿರಸ್ತೇದಾರರಿಗೆ ಸೂಚನೆ ನೀಡಿದರು.
ಕಂದಾಯ ಇಲಾಖೆಯ ಸೇವೆಗಳು ಶೀಘ್ರವಾಗಿ ಹಾಗೂ ನ್ಯಾಯಸಮ್ಮತವಾಗಿ ಸಾರ್ವಜನಿಕರಿಗೆ ತಲುಪುವಲ್ಲಿ ಶ್ರಮಿಸುವಂತೆ  ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಲೋಕೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು ‌

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ