Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ದಲಿತರ ಜಮೀನು ಲಪಟಾಯಿಸಲು ಭೂಗಳ್ಳರ ಸಂಚು : ಆರೋಪ

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಹೂವಿನಕೊಪ್ಪಲು ಗ್ರಾಮದ ದಲಿತ ಸಮುದಾಯದ ಹತ್ತಾರು ಕುಟುಂಬಗಳು ಸುಮಾರು 30 ವರ್ಷಗಳಿಂದ ಸುಜ್ಜಲೂರು ಗ್ರಾಮದ ಸರ್ವೆ ನಂಬರ್ 261 ರಲ್ಲಿ ಸರ್ಕಾರಿ ಖರಾಬು ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಈ ಜಮೀನನ್ನು ಕೆಲವು ಭೂಗಳ್ಳರು ಲಪಟಾಯಿಸಲು ಸಂಚು ನಡೆಸಿದ್ದು, ದಲಿತ ಸಮುದಾಯದ ರೈತರಿಗೆ ಧಮ್ಕಿ ಹಾಕಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮಳವಳ್ಳಿ ತಾಲ್ಲೂಕಿನ ವಕ್ಕರಿಸಿರುವ ಕೆಲ ಬಲಾಢ್ಯ ಭೂಮಿ ಕಳ್ಳರು ಏಕಾಏಕಿ ದಲಿತರು ಉಳುಮೆ ಮಾಡುತ್ತಿದ್ದ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ಭೂಮಿಯಲ್ಲಿದ್ದ ಫಸಲುಗಳನ್ನು ಹಾಳು ಮಾಡಿ, ಅಲ್ಲಿದ್ದ ಮರಗಳನ್ನು ಕತ್ತರಿಸಿ ಹೊರಸಾಗಸಿ ಮಾರಿಕೊಂಡಿದ್ದಾರೆ. ಅಲ್ಲದೆ ಕೇಳಲು ಹೋದ ರೈತರ ಮೇಲೆ ಹರಿಹಾಯ್ದು ಮನಸೋ ಇಚ್ಚೆ ಬಯ್ದು ನನ್ನ ರಾಜ್ಯದ ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ ಎಂದು ಧಮ್ಕಿ ಹಾಕಿದ್ದಾರೆಂದು ದಲಿತರು ಮಳವಳ್ಳಿ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.

ನೊಂದ ರೈತರು ತಮ್ಮ ಅಳಲು ತೋಡಿಕೊಳ್ಳಲು ಕಿರುಗಾವಲು ಠಾಣೆಗೆ ಹೋದರೆ ಕೇವಲ ಒಂದು acknowledgement ಕೊಟ್ಟು ಹೊರ ಕಳುಹಿಸಿದ್ದು, ಈ ವಿಚಾರ ತಿಳಿದು ಹಾಡ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನಡಕಲಪುರ ಮಂಜುನಾಥ್ ಹಾಗೂ ದಲಿತ ಸಮುದಾಯದ ಮುಖಂಡರಾದ ಮಳವಳ್ಳಿ ಕೃಷ್ಣಮೂರ್ತಿ, ಹೂವಿನಕೊಪ್ಪಲು ಪ್ರಸನ್ನ ಮತ್ತಿತರರು ಸೇರಿ ಮಳವಳ್ಳಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ನೆಡೆದ ಅಷ್ಟು ವಿಚಾರಗಳನ್ನು ಗಮನಕ್ಕೆ ತಂದಿದ್ದು, ತಕ್ಷಣ ಎಚ್ಚೆತ್ತ ತಹಶಿಲ್ದಾರರು ಗ್ರಾಮ ಆಡಳಿತಾಧಿಕಾರಿ ಮತ್ತು ಆರ್.ಐ ಜೊತೆ ಸ್ಥಳ ತಪಾಸಣೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ಭೂಗಳ್ಳರಿಂದ ಸದರಿ ಜಾಗವನ್ನು ರಕ್ಷಣೆ ಮಾಡುವಂತೆ ಮತ್ತು ಅತಿಕ್ರಮಣ ಮಾಡಿದ ಭೂಗಳ್ಳರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಭೂಗಳ್ಳರು ತುಂಬಾ ಪ್ರಭಾವಶಾಲಿ ವ್ಯಕ್ತಿಗಳಾಗಿರುವುದರಿಂದ ರಕ್ಷಣೆ ಕೋರಿ ಜಿಲ್ಲಾಧಿಕಾರಿಗಳ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಮಹದೇವ ಮೂರ್ತಿ, ಗೋಪಾಲ, ಸಿದ್ದಯ್ಯ, ರಮೇಶ್, ಪಾಂಡು, ಜಯರಾಮ, ದೊಳ್ಳಯ್ಯ ಸೇರಿದಂತೆ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ