Sunday, November 22, 2026

ಪ್ರಾಯೋಗಿಕ ಆವೃತ್ತಿ

ಶಿಕ್ಷಣ ವ್ಯವಸ್ಥೆಯಿಂದ ಅಮೂಲಾಗ್ರ ಬದಲಾವಣೆ : ಮಹದೇವಪ್ಪ

ಶಿಕ್ಷಣದಿಂದ ಮಹತ್ತರವಾದ ಬದಲಾವಣೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ ಹೇಳಿದರು.

ಮಂಡ್ಯ ನಗರದ  ಗಾಂಧಿಭವನದಲ್ಲಿ ರಾಜ್ಯ ಪದವಿಪೂರ್ವ ಕಾಲೇಜು ಪರಿಶಿಷ್ಠಜಾತಿ ಮತ್ತು ಪರಿಶಿಷ್ಠವರ್ಗಗಳ ಅಧಿಕಾರಿಗಳು ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಬೋಧಕೇತರ ನೌಕರರ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನೆ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ ಶಿಕ್ಷಣ ವ್ಯವಸ್ಥೆಯಿಂದ ಅಮೂಲಾಗ್ರ ಬದಲಾವಣೆ ಯಾಗುತ್ತಿರುವುದನ್ನು ಕಾಣಬಹುದಾಗಿದೆ, ಶಿಕ್ಷಣ ಪಡೆದವರು ಉತ್ತಮ ಜೀವನ ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದಾರೆ, ಉದ್ಯೋಗ-ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ನುಡಿದರು.

ವಿದ್ಯಾವಂತ ಎಸ್.ಸಿ.ಎಸ್.ಟಿ.ಸಮುದಾಯಗಳ ಜನತೆ ಪ್ರಜ್ಞಾವಂತರಾಗಬೇಕು, ಪ್ರಗತಿಶೀಲರಾಗಬೇಕು, ಮೌಢ್ಯತೆಯಿಂದ ಹೊರಬಂದು, ಬುದ್ಧ ಬಸವ ಅಂಬೇಡ್ಕರ್ ಅವರ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರಿ ಎಸ್ಸಿಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ, ರಾಜ್ಯ ಸರ್ಕಾರಿ ಎಸ್ಸಿಎಸ್ಟಿ ನೌಕರರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಿರುವ ಸವಲತ್ತು ಮತ್ತು ಸೌಲಭ್ಯಗಳನ್ನು ವಂಚಿಸುವ ವಿವಿಧ ಇಲಾಖೆಗಳ ಐಎಎಸ್ ಮತ್ತು ಉನ್ನತಮಟ್ಟದ ಅಧಿಕಾರಿಗಳನ್ನು ಜೈಲಿಗೆ ಕಳಿಸುವ ಹೋರಾಟ ಆರಂಭವಾಗಬೇದೆ ಎಂದು ಎಚ್ಚರಿಸಿದರು.

ಮೀಸಲಾತಿ ಹುದ್ದೆಗಳು, ಬಡ್ತಿ ಹುದ್ದೆಗಳು ಹೀಗೆ ಅನೇಕ ಸೌಲಭ್ಯಗಳು ರಾಜ್ಯ ಸರ್ಕಾರಿ ಎಸ್ಸಿಎಸ್ಟಿ ನೌಕರರಿಗೆ ಸಕಾಲದಲ್ಲಿ ದೊರಯಬೇಕಿದೆ, ಇವುಗಳನ್ನು ನೀಡದೆ ವಂಚಿಸುವ ಎಸ್ಸಿಎಸ್ಟಿ ನೌಕರರ ವಿರೋಧಿ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ತಕ್ಕ ಶಿಕ್ಷೆಗೆ ಗುರಿಪಡಿಸುವುದು ಅನಿವರ‍್ಯವಾಗಿದೆ, ೪-೫ಮಂದಿಗೆ ಈ ರೀತಿ ಆದರೆ ಎಲ್ಲರೂ ಎಚ್ಚೆತ್ತುಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಾಧಕ ಉಪನ್ಯಾಸಕರು-ಪ್ರಾಂಶುಪಾಲರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ಸಿ.ಚಲುವಯ್ಯ, ನೌಕರರ ಸಂಘದ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಜಯರಾಮು, ಜಿಲ್ಲಾ ಘಟಕ ಅಧ್ಯಕ್ಷ ಶಿವಲಿಂಗಯ್ಯ, ಗೌರವಾಧ್ಯಕ್ಷ ವಿ.ಕೆ.ಆನಂದ್,ಹನುಮಂತರಾಯಪ್ಪ, ಕಾರ್ಯಾಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಕಾರ್ಯದರ್ಶಿ ಚಂದ್ರಲಿಂಗು, ಸಂ.ಕಾರ್ಯದರ್ಶಿ ಪಿ.ಲಂಕೇಶ್, ಪ್ರತಿನಿಧಿ ವೈ.ಸುರೇಶ್, ಸಿ.ಸುರೇಶ್, ಖಜಾಂಚಿ ಪ್ರಕಾಶ್ ಮತ್ತು ತಾಲೂಕು ಪದಾಧಿಕಾರಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ