ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ಪರವಾಗಿ ಕೆಲಸ ಮಾಡುತ್ತಿದೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ರೂ.50.00 ಲಕ್ಷಗಳ ವೆಚ್ಚದಲ್ಲಿ ಲೋಕಸರ ಶಾಖಾ ನಾಲೆಯ ವ್ಯಾಪ್ತಿಗೆ ಬರುವ 13ನೇ ವಿತರಣಾ ನಾಲೆಯ ಕೊನೆ ಭಾಗಕ್ಕೆ ಆರ್.ಸಿ.ಸಿ ಟ್ರಫ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದ್ದು ರೈತರು ಬಹಳ ವಿಶ್ವಾಸದಿಂದ ವ್ಯವಸಾಯ ಮಾಡಿ, ರೈತರಿಗೆ ಗೊಬ್ಬರ,ಸಾಲ, ಬಿತ್ತನೆ ಬೀಜ ಎಲ್ಲವನ್ನು ವಿತರಣೆ ಮಾಡುತ್ತೇವೆ.ರೈತರು ಉತ್ತಮವಾಗಿ ವ್ಯವಸಾಯ ಮಾಡುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನೋಪಯೋಗಿ ಕೆಲಸವನ್ನು ಯಾವುದನ್ನು ಸರ್ಕಾರ ನಿಲ್ಲಿಸಲ್ಲ, ಎಲ್ಲವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ.ಮಧು, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜೆ.ಗಿರೀಶ್,ಉಪಾಧ್ಯಕ್ಷ
ಬಸವರಾಜು, ಸದಸ್ಯ ಗಿರೀಶ್, ಯುವ ಮುಖಂಡ ಸುರೇಂದ್ರ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್, ಸಹಾಯಕ ಇಂಜಿನಿಯರ್ ಪ್ರವೀಣ್, ಟಾಸ್ಕ್ ವರ್ಕ್ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ ಸೇರಿದಂತೆ ಇತರರು ಹಾಜರಿದ್ದರು




