ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ವರದಿಯಲ್ಲಿ ಹಲವು ಗೊಂದಲಗಳಿದ್ದು ಆಕ್ಷೇಪಣೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ವತಿಯಿಂದ ಮಂಡ್ಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಸದರಿ ಆದೇಶವನ್ನು Edgar Thurston ಮತ್ತು K Rangachari ಅವರು ಸಂಶೋಧನೆ ಮಾಡಿ ಬರೆದಿರುವ “Caste and Tribes of Southern India” ಅದರ ಜನಸಂಖ್ಯೆಯನ್ನು ಒಟ್ಟುಗೂಡಿಸುವುದು ಹಾಗೂ ಮೀಸಲಾತಿ ಪ್ರಮಾಣವನ್ನು ಮರು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಸಮೀಕ್ಷೆಯನ್ನು ಸಮರ್ಪಕವಾಗಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೇ ಇರುವುದರಿಂದ ಸಂಗ್ರಹಿಸಿರುವ ದತ್ತಾಂಶಗಳನ್ನು ದೃಢೀಕರಿಸಲು 15 ದಿನಗಳ ಕಾಲಾವಕಾಶ ನೀಡಿ ಆಕ್ಷೇಪಣೆಗಳನ್ನು – ತಂತ್ರಾಂಶದ ಮೂಲಕ ಆಹ್ವಾನಿಸಬೇಕು. ಸ್ವೀಕೃತ ದೂರುಗಳನ್ನು/ ಮನವಿಗಳನ್ನು ಆಧರಿಸಿ ಸೂಕ್ತ ಸಮಂಜಸವಾಗಿ ಮೀಸಲಾತಿ ಮರು ಹಂಚಿಕೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆರಗೋಡು ಗುರುಪ್ರಸಾದ್, ನಗರಸಭಾ ಸದಸ್ಯ ಶ್ರೀಧರ್, ಸುರೇಶ್ ಕಂಠಿ, ವಿಜಯಲಕ್ಷ್ಮಿ ರಘುನಂದ್, ಜೆ.ರಾಮಯ್ಯ, ಗಂಗರಾಜ್, ಸುಂಡಹಳ್ಳಿ ಮಂಜುನಾಥ್, ಸಾತನೂರು ಜಯರಾಮ್, ದೀಪಕ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.




