ಪಸ್ತುತ ಬಿತ್ತನೆ ಕಾರ್ಯ ಪ್ರಾರಂಭವಾಗಿರುವುದರಿಂದ ಮಂಡ್ಯ ಜಿಲ್ಲೆಯ ವಿ.ಸಿ.ನಾಲೆ ಕೊನೆ ಭಾಗಕ್ಕೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ರೈತಸಂಘದ ನೇತೃತ್ವದಲ್ಲಿ ರೈತರು ಮಂಡ್ಯ ಕಾವೇರಿ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿ.ಸಿ.ನಾಲೆ ಅಚ್ಚಕಟ್ಟಿನ ಲೋಕಸರ ಶಾಖೆಯ ಮದ್ದೂರು ಭಾಗ, ಮಳವಳ್ಳಿ ಕೊನೆ ಭಾಗ ಹಾಗೂ ಮದ್ದೂರು ತಾಲ್ಲೂಕೊನ ಕೊನೆಯ ಅಚ್ಚುಕಟ್ಟಿಗೆ ಸಮರ್ಪಕವಾಗಿ ನೀರು ಒದಗಿಸದ ಪರಿಣಾಮ ನಾಟಿ ಕಾರ್ಯವು ನೆನೆಗುದಿಗೆ ಬಿದ್ದಿದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುವ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ನಾಲಾ ಕಾಮಗಾರಿಗಳು ಕೈಗೆತ್ತಿಗೊಳ್ಳಲಾಗಿದೆ. ಇದಕ್ಕೆ ಆ ಭಾಗದ ಶಾಸಕರ ಬೇಜಾವಾಬ್ದಾರಿಯೇ ಕಾರಣ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಕಿಡಿಕಾರಿದರು.
ನಾಲಾ ಕಾಮಗಾರಿಯಲ್ಲಿ ಕೃಷಿ ಚಟುವಟಿಕೆ ಇಲ್ಲದ ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳಬೇಕು, ಈ ತಕ್ಷಣ ನಾಲೆಗಳಿಗೆ ನೀರು ಬಿಡಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ರವಿಕುಮಾರ್.ಬೋರಪುರ ಶಂಕರೇಗೌಡ, ಮದ್ದೂರು ತಾಲೂಕು ಅಧ್ಯಕ್ಷ ಉಮೇಶ್, ವಿನೋದ್ , ಬಾಬು, ಶಂಭೂಗೌಡ, ಲಿಂಗಪ್ಪಾಜಿ, ಪಟೇಲ್, ಬೋರೇಗೌಡ, ಶಿವಲಿಂಗೇಗೌಡ, ಬೋಮ್ಮಲಿಂಗೇಗೌಡ, ನಾಗಲಿಂಗು ಹಾಗೂ ಚಿಕ್ಕ ಮರಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.




