ಧರ್ಮಸ್ಥಳದಲ್ಲಿ ನೂರಾರು ಅಸಹಜ ಸಾವುಗಳ ಸಂಭವಿಸಿದ ವಿಚಾರಕ್ಕೆ ಸಂಬಂಧಿಸಿದ್ದಂತೆ ಎಸ್.ಐ.ಟಿ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಬಿಜೆಪಿ ಒಂದು ಬಣ ಸೌಜನ್ಯ ಮನೆಗೆ ಭೇಟಿ ನೀಡಿ ನ್ಯಾಯ ಕೊಡಿಸುವ ನಾಟಕವಾಡಿದರೆ, ಇನ್ನೊಂದು ಬಣ ಬೀದಿಯಲ್ಲಿ ಧರ್ಮ ರಕ್ಷಣೆಯ ಹಾಡು, ಕುಣಿತ ಮಾಡುತ್ತಿದೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ ‘ಲಾಭ’ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ ಬಿಜೆಪಿ ನಾಯಕರ ಬೀದಿ ನಾಟಕಗಳಂತೆ ಇರುತ್ತದೆ.
ಬಿಜೆಪಿಯ ಬಣಗಳು- ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆದಂತೆ ಪರಸ್ಪರ ವಿರುದ್ಧ ದಿಕ್ಕಿನಲ್ಲೇ ಸಾಗುವುದು.
ಒಂದು ಸೌಜನ್ಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದರೆ, ಇನ್ನೊಂದು… pic.twitter.com/pmG7rUgNXP
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 5, 2025
“>
ಒಟ್ಟಿನಲ್ಲಿ ಈ ಬಣಗಳಿಗೆ ಬೇಕಿರುವುದು ‘ಸೌಜನ್ಯ’ ಕೇಸಿನ ನ್ಯಾಯವೂ ಅಲ್ಲ. ಧರ್ಮ ರಕ್ಷಣೆಯೂ ಅಲ್ಲ. ತಮ್ಮ ತಮ್ಮ ಬಣದ ಶಕ್ತಿ ಪ್ರದರ್ಶನವಷ್ಟೇ! ಎಂದು ಎಕ್ಸ್ ನಲ್ಲಿ ವ್ಯಂಗ್ಯವಾಡಿದ್ಧಾರೆ.
ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ ‘ಲಾಭ’ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ ಬಿಜೆಪಿ ನಾಯಕರ ಬೀದಿ ನಾಟಕಗಳಂತೆ ಇರುತ್ತದೆ. ಬಿಜೆಪಿಯ ಬಣಗಳು- ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆದಂತೆ ಪರಸ್ಪರ ವಿರುದ್ಧ ದಿಕ್ಕಿನಲ್ಲೇ ಸಾಗುವುದು. ಒಂದು ಸೌಜನ್ಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದರೆ, ಇನ್ನೊಂದು ಧಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೋರಾಡುತ್ತದೆ ಎಂದು ಬೊಟ್ಟು ಮಾಡಿದ್ದಾರೆ.




