Friday, November 20, 2026

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗ ಸಮಾಜ ಒಂದುಗೂಡಬೇಕು : ತಿಮ್ಮೇಗೌಡ.

ಒಕ್ಕಲಿಗ ಸಮಾಜದ ಜನರು ಒಗ್ಗೂಡಬೇಕು ಜೊತೆಗೆ ರಾಜ್ಯದಲ್ಲಿ ಒಕ್ಕಲಿಗ ಸಮಾಜ ತುಳಿತಕ್ಕೆ ಒಳಗಾಗುತ್ತಿದ್ದು, ಸಮಾಜ ಅಭಿವೃದ್ದಿಗೆ ಸರ್ಕಾರ ನೆರವುಗಳ ಘೋಷಣೆ ಮಾಡಬೇಕು ಎಂದು ಮಂಡ್ಯ ಒಕ್ಕಲಿಗ ಸಂಘದ ಅ‘್ಯಕ್ಷ ಗೌಡಯ್ಯನ ದೊಡ್ಡಿ ತಿಮ್ಮೇಗೌಡ ತಿಳಿಸಿದರು.

ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀರಂಗಪಟ್ಟಣ ತಾಲೂಕು ಮಟ್ಟದ ಮಂಡ್ಯ ಒಕ್ಕಲಿಗರ ಸಂಘದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಡ್ಯ ಎಂದರೆ ಇಂಡಿಯಾದದಲ್ಲಿ ಹೆಸರಿದ್ದರು ಹಲವು ಸರ್ಕಾರಗಳು ಮಂಡ್ಯದ ಒಕ್ಕಲಿಗ ಸಮಾಜಗಳನ್ನು ಒಡೆದು ಆಳುವ ಯತ್ನ್ನಗಳು ನಡೆದು ನಮ್ಮ ಸಮಾಜವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದೆ. ನಮ್ಮ ಸಮಾಜದ ಜನರು ಒಂದುಗೂಡಿ ತಮ್ಮ ಬೇಡಿಕೆಗಳನ್ನು ಪಡೆದುಕೊಳ್ಳಲು ಧ್ವನಿ ಎತ್ತುವ ಕೆಲಸ ಮಾಡಬೇಕು. ಇವತ್ತಿನ ದಿನದಲ್ಲಿ ಕೇಳಿ ಪಡೆದುಕೊಳ್ಳುವ ಕಾಲ ಬಂದಿದ್ದು, ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕಿದೆ. ಜಿಲ್ಲೆಯ ಒಕ್ಕಲಿಗ ಸಂಘಗಳ ಮೂಲಕ ಸಮಾಜನ ಮಕ್ಕಳಿಗೆ ಒಂದು ವಸತಿ ನಿಲಯ ಹಾಗೂ ತಾಲೂಕು ಮಟ್ಟದಲ್ಲಿ ಒಂದೊಂದು ಒಕ್ಕಲಿಗ ಭವನಗಳನ್ನು ಸರ್ಕಾರಗಳು ನೀಡಬೇಕು . ಇದಕ್ಕೆ ಸರಿಯಾದ ಸ್ಥಳ ಗುರುತು ಮಾಡಿ ಆಯಾ ತಾಲೂಕಿನಲ್ಲಿ ಒಕ್ಕಲಿಗ ಸಮಾಜಗಳಿಗೆ ನಿವೇಶನಗಳನ್ನು ಕಲ್ಪಿಸಬೇಕು.

ಬೇರೆ ಸಮಾಜಗಳಿಗೆ ನೀಡಿದ ಸೌಲಭ್ಯಗಳು ನಮಗೂ ಆಯಾ ತಾಲೂಕು ಮಟ್ಟದಲ್ಲಿ ನಮ್ಮ ಸಮಾಜದ ಬಡವರಿದ್ದು ಅವರನ್ನು ಗುರುತಿಸಿ ಸಮಾಜದ ಏಳಿಗೆಗೆ ಸರ್ಕಾರಗಳು ಸವಲತ್ತುಗಳ ಒದಗಿಸುವ ಕೆಲಸ ಮಾಡಬೇಕು. ಈ ಹಕ್ಕುಗಳ ಪಡೆದುಕೊಳ್ಳಲು ಒಕ್ಕಲಿಗ ಸಮಾಜದ ಜನರು ಒಂದೂಗೂಡಲು ಸಂಘಟಿಸುವ ಕೆಲಸ ಅಗತ್ಯವಿದೆ ಎಂದರು.

ಇದೇ ಸಂಧರ್ಭ  ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಒಕ್ಕಲಿಗರ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಎಂ.ಶೆಟ್ಟಹಳ್ಳಿ ಗ್ರಾಮದ ಇಂದ್ರಕುಮಾರ್ ಅವರನ್ನು ನೇಮಿಸಲಾಯಿತು.

ಮಂಡ್ಯ ಒಕ್ಕಲಿಗರ ಸಂಘದ ಮಂಡ್ಯ ನಗರಾಧ್ಯಕ್ಷ ಶ್ರೀಧರ್, ಸ್ವಾಭಿಮಾನಿ ಒಕ್ಕಲಿಗ ಸಂಘದ ಅಧ್ಯಕ್ಷ ದೇವರಾಜು, ಸಿ.ಸ್ವಾಮಿಗೌಡ, ಲಕ್ಷ್ಮಿನಾರಾಯಣ, ಬೆಳಗೊಳ ಸುನೀಲ್, ಸಿದ್ದರಾಜು, ಟಿ.ಎಂ.ಹೊಸೂರು ಮಹದೇವು, ರುಕ್ಮಾಗದ, ಚಂದನ್, ಶಿವನಂಜು, ‘ರತೇಶ್, ಮಹೇಶ್, ಗಣಂಗೂರು ಸತೀಶ್ , ಕೆ.ಜೆ ಲೋಕೇಶ್,ಸೇರಿದಂತೆ ವಿವಿ‘ ಗ್ರಾಮಗಳಿಂದ ನೂರಾರು ಮಂದಿಒಕ್ಕಲಿಗ ಮುಖಂಡರು ಸಭೆಯಲ್ಲಿ ಹಾಜರಿದ್ದು, ನೂತನ ಅಧ್ಯಕ್ಷ ಇಂದ್ರಕುಮಾರ್ ಅವರನ್ನು ಅಭಿನಂಧಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ