Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು ಪ್ರಕ್ಷುಬ್ದ | ಶಾಂತಿ-ಸೌಹಾರ್ದತೆ ಕಾಪಾಡುವಂತೆ ಶಾಸಕ ಉದಯ್ ಮನವಿ

ಮದ್ದೂರಿನ ಜನರು ಶಾಂತಿ ಪ್ರಿಯರಾಗಿದ್ದು, ಬಿಜೆಪಿ, ಜೆಡಿಎಸ್ ನಾಯಕರ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ.ನೀವೆಲ್ಲರೂ ಶಾಂತಿ-ಸೌಹಾರ್ದತೆ ಕಾಪಾಡಬೇಕೆಂದು ಶಾಸಕ ಕದಲೂರು ಉದಯ್ ಮನವಿ ಮಾಡಿದ್ದಾರೆ.

ಮದ್ದೂರು ಪಟ್ಟಣದಲ್ಲಿ ಗಣೇಶೋತ್ಸವ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ನಂತರ ಪಟ್ಟಣ ಉದ್ವಿಗ್ನಗೊಂಡಿದ್ದರೂ ಶಾಸಕ ಕದಲೂರು ಉದಯ್ ಬಂದಿಲ್ಲ. ಕ್ಷೇತ್ರದ ಜನರ ಮತ ಪಡೆದ ಅವರು ಅವರಿಗಾಗಿ ಬರದೆ ಕಾಣೆಯಾಗಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲೂ ಇಲ್ಲ.ಎಸ್ಕಾರ್ಟ್ ವಾಹನ ಬಿಟ್ಟು ತೆರಳಿದ್ದಾರೆ. ಫೋನ್ ಗೂ ಸಿಗುತ್ತಿಲ್ಲ ಎಂದು ಮಾಧ್ಯಮಗಳು ಸುಳ್ಳು ಹೇಳುತ್ತಾ ಅಪ ಪ್ರಚಾರ ಮಾಡುತ್ತಿದ್ದವು.ಮಾಧ್ಯಮಗಳ ಈ ಅಪ ಪ್ರಚಾರದ ಹಿಂದೆ ಇದ್ದದ್ದು ಆತ ಕಾಂಗ್ರೆಸ್ ಶಾಸಕ.ಸಾಧ್ಯವಾದಷ್ಟು ಜನರ ಮಧ್ಯೆ ಆತನನ್ನು ಕೆಟ್ಟವವನ್ನಾಗಿ,ಹಿಂದೂ ವಿರೋಧಿ ಎಂದು ತೋರಿಸಬೇಕು ಎನ್ನುವ ಕುತಂತ್ರ ಇದರ ಹಿಂದಿತ್ತು.

ಆದರೆ ಇಂದು ಮಧ್ಯಾಹ್ನ 1.45 ರ ವೇಳೆಗೆ ಅದೇ ಮಾಧ್ಯಮವೊಂದಕ್ಕೆ ಪೋನ್ ಮಾಡಿದ ಶಾಸಕ ಕದಲೂರು ಉದಯ್,ನಾನು ಎಲ್ಲೂ ಕಾಣೆಯಾಗಿಲ್ಲ.ಎಲ್ಲೂ ಓಡಿ ಹೋಗಿಲ್ಲ.ಮಾಧ್ಯಮಗಳು ನಿಜ ಸ್ಥಿತಿ ಏನು ಎಂದು ಮೊದಲು ತಿಳಿದುಕೊಳ್ಳಿ.ನಾನು ನನ್ನ ಮಗಳ ಪದವಿ ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ಲಂಡನ್ ಗೆ ಕಳೆದ ರಾತ್ರಿ ಬಂದೆ.ಈಗ ಬೆಳಿಗ್ಗೆ ಸುದ್ದಿ ತಿಳಿದು ಮಾತನಾಡುತ್ತಿದ್ದೇನೆ.ಮದ್ದೂರಿನಲ್ಲಿ ಈ ಹಿಂದೆ ಎಂದೂ ಈ ರೀತಿಯ ಘಟನೆ ನಡೆದಿರಲಿಲ್ಲ.ಈಗ ಬಿಜೆಪಿ-ಜೆಡಿಎಸ್ ನಾಯಕರು ಸ್ವಾರ್ಥ ರಾಜಕೀಯಕ್ಕಾಗಿ ಕೋಮು ಗಲಭೆ ಮಾಡಿಸುತ್ತಿದ್ದಾರೆ.ಅವರ ಮಕ್ಕಳ್ಯಾರೂ ಕೋಮು ಗಲಭೆಗಳಲ್ಲಿ ಭಾಗಿಯಾಗಲ್ಲ.ಅಮಾಯಕ ಜನರನ್ನು ಎತ್ತಿಕಟ್ಟಿ ರಾಜಕೀಯ ಮಾಡುವ ಅಂತಹವರ ಮಾತುಗಳನ್ನು ನಂಬಿ ತಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ.ಈ ಘಟನೆಗೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಿದ್ದು,ಹಿಂದೂ-ಮುಸ್ಲಿಂ ಯಾರೇ ತಪ್ಪು ಮಾಡಿದ್ರೂ ಪೋಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಶಾಸಕ ಕದಲೂರು ಉದಯ್ ತಮ್ಮ ಮಗಳ ಪದವಿ ವ್ಯಾಸಾಂಗಕ್ಕಾಗಿ ಲಂಡನ್ ಗೆ ತೆರಳಿದ ಮಾಹಿತಿ ಗೊತ್ತಿದ್ದರೂ ಕೂಡಾ ಮಾಧ್ಯಮಗಳು,ಕ್ಷೇತ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದರೂ ಅವರಿನ್ನು ಬಂದಿಲ್ಲ ಫೋನ್ಗೂ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡಿ ಜನರನ್ನು ಶಾಸಕರ ವಿರುದ್ಧ ಎತ್ತಿ ಕಟ್ಟಲು ಸಂಚು ಮಾಡಿದ್ದು ಕುತಂತ್ರ ಪತ್ರಿಕೋದ್ಯಮ.ಇದು ಖಂಡಿತಾ ಜನಪರ ಮಾಧ್ಯಮದ ಲಕ್ಷಣವಂತೂ ಅಲ್ಲ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ