Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಚಾಕುವಿನಿಂದ ಇರಿದು ಯುವಕ ಕೊಲೆ

ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಿರುವ ದುಷ್ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಅವ್ವೇರಹಳ್ಳಿ – ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯಲ್ಲಿ ಜರುಗಿದೆ.

ಮಳವಳ್ಳಿ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ವಾಸಿ ಮಹಾದೇವಸ್ವಾಮಿ ಎಂಬುವರ ಮಗನಾದ 24 ವರ್ಷದ ಮೋಹನ್ ಕುಮಾರ್ ಎಂಬಾತನೇ ಕೊಲೆಯಾಗಿರುವ ಯುವಕನಾಗಿದ್ದಾನೆ.

ಗುರುವಾರ ರಾತ್ರಿ 10.30 ರ ಸಮಯದಲ್ಲಿ ಈತ ಅವ್ವೇರಹಳ್ಳಿ ದೊಡ್ಡಬೂಹಳ್ಳಿ ನಡುವಿನ ಕಾಲುವೆ ರಸ್ತೆಯ ಬಳಿ ಸತ್ತು ಬಿದ್ದಿದ್ದು ಯಾರೋ ದುಷ್ಕರ್ಮಿ ಗಳು ಮುಖದ ಮೇಲೆಲ್ಲಾ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈತನ ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಸುದ್ದಿ ತಿಳಿದು ಸ್ಥಳಕ್ಕೆ ಧಾವಿದಿರುವ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್ ಅವರುಗಳು ಪರಿಶೀಲನೆ ನಡೆಸಿದ್ದಾರೆ.

ಮೃತನ ತಂದೆ ಮಹಾದೇವಸ್ವಾಮಿ ಶುಕ್ರವಾರ ಮಧ್ಯಾಹ್ನ 12.30ರ ಸಮಯದಲ್ಲಿ ನೀಡಿದ ದೂರಿನ ಮೇರೆಗೆ ಬೆಳಕವಾಡಿ ಪಿಎಸ್ ಐ ಪ್ರಕಾಶ್ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ