ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿರುವ ಮಂಡ್ಯ ತಾಲ್ಲೂಕಿನ ಹನಿಯಂಬಾಡಿ ಗ್ರಾಮದ ಬಳಿ ರಸ್ತೆ ಗುಂಡಿಗೆ ಕೆ.ಆರ್.ಎಸ್ ಕಾರ್ಯಕರ್ತರು ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ವಿನೂತನ ಪ್ರತಿಭಟನೆ ಪ್ರತಿಭಟನೆ ನಡೆಸಿದರು.
ಮಂಡ್ಯ ಜಿಲ್ಲಾ ಘಟಕ ಕೆ ಆರ್ ಎಸ್ ಪಕ್ಷದ ನೇತೃತ್ವದಲ್ಲಿ ಎಸ್.ಹೆಚ್.84 ಶಿರಸಿ – ನಂಜನಗೂಡು ರಸ್ತೆಯನ್ನು ಪೂಜಿಸಿದ ಕಾರ್ಯಕರ್ತರು ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೇ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ- ಕಿರುಗಾವಲು ರಸ್ತೆಯು ಹನಿಯಂಬಾಡಿ ಬಳಿ ತೀವ್ರವಾಗಿ ಗುಂಡಿ ಬಿದ್ದಿದೆ, ಇದರಿಂದ ಪ್ರತಿನಿತ್ಯ ಪ್ರಯಾಣಿಕರು ಬಿದ್ದುಗಾಯಗೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಗುಂಡಿ ಪೂಜೆ ಗಿಡ ನೆಡುವ ಮೂಲಕ ಪೂಜೆ ನಡೆಸಿದರು.
ಅಭಿವೃದ್ಧಿಯ ಹರಿಕಾರ ಎಂದು ಹೇಳಿಸಿಕೊಳ್ಳುವ ಮಂಡ್ಯ ಜಿಲ್ಲಾ ಉಸ್ತುವಾರಿಗಳು ಇದನ್ನು ಗಮನಿಸಿ ಮಂಡ್ಯ ಜಿಲ್ಲೆಯಾದ್ಯಂತ ಇರುವ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಅವರ ಗಮನ ಹರಿಸಬೇಕು. ಮದ್ದೂರಿನಲ್ಲಿ ಕಿರು ಸೇತುವೆ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವುದೇ ಸುರಕ್ಷಾತ ಕ್ರಮಗಳನ್ನು ಅನುಸರಿಸದೇ ಒಬ್ಬ ಅಮಾಯಕ ರೈತನ ಪ್ರಾಣ ಹೋಗಿದೆ. ಇಲ್ಲಿಯೂ ರಸ್ತೆಗಳು ಬಲಿಗಾಗಿ ಕಾದು ಕುಳಿತಿವೆ, ಅನಾಹುತ ನಡೆಯುವ ಮುನ್ನ ಸಚಿವರು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ರೈತ ಘಟಕ ಅಧ್ಯಕ್ಷ ರಾಜಣ್ಣ, ಕೆ ಆರ್ ಪೇಟೆ ಅಧ್ಯಕ್ಷ ನಾಗರಾಜ್, ಯುವ ಘಟಕ ಅಧ್ಯಕ್ಷ ಪ್ರಮೋದ್, ಮಂಡ್ಯ ಕಾರ್ಯದರ್ಶಿ ಜಯರಾಮ್, ಯುವ ಘಟಕ ಪ್ರಧಾನ ಕಾರ್ಯದರ್ಶಿ ದೀಪಿಕಾ, ರೈತ ಘಟಕ ಪ್ರಧಾನ ಕಾರ್ಯದರ್ಶಿ ಹರೀಶ್, ಮಳವಳ್ಳಿ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ, ಪರಮೇಶ್ ಕುಮಾರ್ ಹಾಗೂ ತಿಮ್ಮೇಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.




