ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರಕ್ಕೆ ನಾಯಿಗಳ ಹಿಂಡು ಲಗ್ಗೆಯಿಟ್ಟಿದ್ದು, ಗ್ರಾಹಕರು ಭಯಭೀತರಾದ ಸನ್ನಿವೇಶ ಕಂಡು ಬಂತು.
ಇಲ್ಲಿನ ಎಟಿಎಂ ಕೇಂದ್ರದಲ್ಲಿ ಐದಾರು ನಾಯಿಗಳ ಗುಂಪು ಬೀಡುಬಿಟ್ಟಿದ್ದು, ಹಣ ಡ್ರಾ ಮಾಡಲು ಬರುವ ಗ್ರಾಹಕರಲ್ಲಿ ಭಯವನ್ನು ಸೃಷ್ಟಿಸಿದ್ದಲ್ಲದ್ದೆ ಕೆಲಕಾಲ ಆತಂಕವನ್ನು ಸೃಷ್ಠಿಸಿದ್ದವು.
ಎಟಿಎಂ ಕೇಂದ್ರದಲ್ಲಿ ವಾಚ್ ಮೆನ್ ಇಲ್ಲದಿದ್ದ ಕಾರಣ ನಾಯಿಗಳ ಗುಂಪು ಒಳ ಹೊಕ್ಕು ಮಲಗಿದ್ದವು. ಎಟಿಎಂ ಕೇಂದ್ರಕ್ಕೆ ಶ್ವಾನ ಪಡೆಗಳೇ Z ಶ್ರೇಣಿಯ ಭದ್ರತೆ ಒದಗಿಸುತ್ತಿರುವುದಾಗಿ ಸಾರ್ವಜನಿಕರು ಕಿಡಿಕಾರಿ ವಾಚ್ ಮೆನ್ ನಿಯೋಜಿಸುವಂತೆ ಒತ್ತಾಯಿಸಿದ್ದಾರೆ.




