Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಲಗೈ ಸಮುದಾಯ ‘ಬೌದ್ಧ’ ಎಂದೇ ನಮೂದಿಸಲಿ : ಸುರೇಶ್ ಕಂಠಿ

ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಬಂಧುಗಳು ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಗಣತಿ ನಡೆಸಲಾಗುತ್ತಿದ್ದು, ಪರಿಶಿಷ್ಠ ಜಾತಿಯ ಬಲಗೈ ಸಮುದಾಯದ ವಲಯ ಜನಾಂಗದವರು ಧರ್ಮ ಕಾಲಂನಲ್ಲಿ ಬೌದ್ಧ, ಜಾತಿ ಕಾಲಂನಲ್ಲಿ ಹೊಲಯ, ಉಪಜಾತಿ ಕಾಲಂನಲ್ಲಿ ಪರಿಶಿಷ್ಠ ಜಾತಿ ಹೊಲಯ ಎಂದು ನಮೂದಿಸಬೇಕೆಂದರು. ಹೀಗೆ ಸರಿಯಾದ ರೀತಿಯಲ್ಲಿ ನಮೂದಿಸುವ ಮೂಲಕ ಭವಿಷ್ಯದ ಸಮುದಾಯದ ಪೀಳಿಗೆಗೆ ಸೂಕ್ತ ಮೀಸಲಾತಿ ಸವಲತ್ತುಗಳು ಒದಗುವಂತಾಗಬೇಕು. ಈ ನಿಟ್ಟಿನಲ್ಲಿ ಸಹಕರಿಸುವಂತೆ ಕೋರಿದರು.

ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಹೆಚ್.ಜಿ.ಗಂಗರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಈ ಸಂಬಂಧ ಜಾಗೃತಿ ಮೂಡಿಸಲು ಸ್ಥಳೀಯ ಮುಖಂಡರು ಅರಿವು ಕಾರ‍್ಯಕ್ರಮಗಳನ್ನು ಕೈಗೊಳ್ಳಬೇಕು. ಗಣತಿಯ ವೇಳೆ ಮುಖಂಡರು ಗಣತಿದಾರರೊಂಗೆ ಮನೆಮನೆಗೆ ತೆರಳಿ ಸೂಕ್ತ ಮಾಹಿತಿ ಒದಗಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಆನಂದ್, ಸಿದ್ದರಾಜು, ಶಿವಣ್ಣ, ರಮೇಶ್, ನಿತ್ಯಾನಂದ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ