Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮಿಮ್ಸ್ ನೌಕರನ ವಿರುದ್ದ ರೌಡಿ ಶೀಟ್ ತೆರೆಯಲು ಒತ್ತಾಯ

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲು ಮಂಡ್ಯ ಮಿಮ್ಸ್ ಮಾಹಿತಿ ಕಛೇರಿಗೆ ತೆರಳಿದ ಸಂದರ್ಭದಲ್ಲಿ ಏಕಾಏಕಿ ಹಲ್ಲೆ ಮಾಡಿದ ಮಿಮ್ಸ್ ನೌಕರ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಸಾಮಾಜಿಕ ಕಾರ‍್ಯಕರ್ತ ಎಚ್.ಎಸ್.ಸಾಗರ್ ಒತ್ತಾಯಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.19ರಂದು ಮಿಮ್ಸ್ ಮಾಹಿತಿ ಕೇಂದ್ರದಲ್ಲಿ ಬಲರಾಮ್ ಅವರ ಬಳಿ ಸಾರ್ವಜನಿಕ ಮಾಹಿತಿ ನೀಡುವಂತೆ ಮನವಿ ಮಾಡಿದ್ದು, ವಿಷಯ ತಿಳಿದ ಬಿ.ಕೆ.ಚಂದ್ರಶೇಖರ್ ಅವಾಚ್ಯ ಶಬ್ದಗಳಿಂದ ನಿಂಧಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಅದು ಮಾತ್ರವಲ್ಲದೇ ನನ್ನ ಮೊಬೈಲ್ ಜಖಂ ಮಾಡಿದ್ದು, ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದಾಗ, ಅಲ್ಲಿನ ಪೊಲೀಸರು ಲಿಖಿತ ದೂರು ಕೊಡುವಂತ ತಿಳಿಸಿದ್ದು, ಲಿಖಿತ ದೂರು ಸ್ವೀಕರಿಸದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ ನಂತರ ಮಾಡಿದ ತಪ್ಪಿಗಿಂತಲೂ ಕಡಿಮೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ದೂರಿದರು.

2007ರಲ್ಲಿ ಮಿಮ್ಸ್ ಗೆ ನೇಮಕವಾದ ಬಿ.ಕೆ.ಚಂದ್ರಶೇಖರ್ ದಾಖಲಾತಿಗಳು ಅಕ್ರಮವಾಗಿದ್ದು, ಅವರು ಮಿಮ್ಸ್ ನಲ್ಲಿ ಹುದ್ದೆ ಪಡೆದ ವಿಚಾರ ಹಲವು ಅನುಮಾನಗಳನ್ನು ಮೂಡಿಸಿದೆ. ಈ ಸಂಬಂಧ ಲೋಕಾಯುಕ್ತರಲ್ಲಿ ದೂರು ನೀಡಿದ್ದೇನೆ. ಅಲ್ಲಿಯೂ ನೀನು ಏನು ಮಾಡಲಾಗುವುದಿಲ್ಲ ಎಂದು ಬಿ.ಕೆ.ಚಂದ್ರಶೇಖರ್ ಸವಾಲು ಹಾಕಿದ್ದಾರೆ ಎಂದು ಹೇಳಿದರು.

ಕೂಡಲೇ ನಕಲಿ ದಾಖಲಾತಿ ನೀಡಿ ಹುದ್ದೆ ಪಡೆದ ಅವರ ವಿರುದ್ಧ ಉನ್ನತ ತನಿಖೆಯಾಗಬೇಕು, ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟಬೇಕು. ಈ ಹಿಂದೆಯೂ ಹಲವರ ಮೇಲೆ ಹಲ್ಲೆ ಮಾಡಿರುವ ಬಿ.ಕೆ.ಚಂದ್ರಶೇಖರ್ ವಿರುದ್ಧ ರೌಡಿ ಶೀಟರ್ ತೆರೆಯಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರೈತ ಹೋರಾಟಗಾರ ಅಣ್ಣಯ್ಯ, ಸಾಮಾಜಿಕ ಹೋರಾಟಗಾರ ಶಿವರಾಮು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ