ಮದ್ದೂರು ಪಟ್ಟಣದಲ್ಲಿ Single use plastic ಅಂದರೆ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ ವ್ಯಾಪಾರಿಗಳ ಅಂಗಡಿಗಳನ್ನು ಪುರಸಬೆ ಅಧಿಕಾರಿಗಳಿಂದ ತಪಾಸಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ಹಾಕಲಾಯಿತು.
ಮದ್ದೂರಿನ ಪುರಸಭೆ ಅಧಿಕಾರಿಗಳು ಎಲ್ಲಾ ಹೋಲ್ ಸೇಲ್ ವ್ಯಾಪಾರಿ ಅಂಗಡಿಗಳಿಗೆ, ವ್ಯಾಪರಸ್ಥರಿಗೆ ಪ್ಲಾಸ್ಟಿಕ್ ನಿಷೇಧವನ್ನು ಮಾಡುವಂತೆ ಜುಲೈ ತಿಂಗಳ ಮೊದಲ ವಾರದಲ್ಲೇ ಸೂಚನೆ ನೀಡಿದ್ದರು. ಅದಾಗ್ಯೂ ಕೆಲವು ಅಂಗಡಿ ಮುಗ್ಗಟುಗಳು, ಹೋಟೆಲ್ ಮತ್ತು ಬಾರ್ ಸೇರಿದಂತೆ ಹಲವು ವ್ಯಾಪರಸ್ಥರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದೆ ಬಳಕೆಯನ್ನು ಮುಂದುವರಿಸುತ್ತಿದ್ದದ್ದು ಗಮನಕ್ಕೆ ಬಂದು, ಮದ್ದೂರಿನ ಪುರಸಭೆ ಅಧ್ಯಕ್ಷರಾದ ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳ ನೇತೃತ್ವದಲ್ಲಿ ಅಂಗಡಿ ಮುಗ್ಗಟುಗಳ ಮೇಲೆ ದಾಳಿ ಮಾಡಲಾಯಿತು.

ಜುಲೈ ತಿಂಗಳಲ್ಲಿ ಏಕ ಬಳಕೆ ನಿಷೇದ ಮಾಡಿ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಕವರ್ ಸೇರಿದಂತೆ ಇತರ ಎಲ್ಲಾ ರೀತಿಯ ನಿಷೇದಿತ 10 ಕೆ.ಜಿ. ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡು, ಸುಮಾರು 2400 ರೂ ದಂಡವನ್ನು ನಿಷೇದಿತ ಪ್ಲಾಸ್ಟಿಕ್ ಬಳಸುತ್ತಿದ್ದ, ಪೂರೈಸುತ್ತಿದ್ದ ವ್ಯಾಪರಸ್ಥರಿಗೆ ದಂಡ ವಿಧಿಸಲಾಗಿತ್ತು. ಇದುವರೆವಿಗೂ ಸುಮಾರು 40 ಕೆ.ಜಿ. ನಿಷೇದಿತ ಪ್ಲಾಸ್ಟಿಕ್ ನ್ನು ಅಂಗಡಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದು ಪುರಸಭೆಯ ಪರಿಸರ ಅಭಿಯಂತರರಾದ ನಾಗೇಂದ್ರ ವಿ.ಜಿ. ಅವರು ತಿಳಿಸಿದರು.
ಮದ್ದೂರಿನ ಉಪಹಾರ ಮಂದಿರಗಳಲ್ಲಿ ಅಹಾರವನ್ನು ಪಾರ್ಸೆಲ್ ಮಾಡಲು ನಿಷೇದಿತ ಪ್ಲಾಸ್ಟಿಕ್ ಬಳಸುತ್ತಿದ್ದರು. ಇದು ಆಹಾರವು ವಿಷಯುಕ್ತವಾಗಿ ಬದಲಾವಣೆಯಾಗಲು ಕಾರಣವಾಗುತ್ತಿತ್ತು. ಮದ್ದೂರಿನ ಉಫಾಹರ ಮಂದಿರಕ್ಕೆ ದಾಳಿ ಮಾಡಿ, ದಂಡ ವಿಧಿಸಿ, ಇನ್ನೂ ಇಂತಹ ನಿಷೇದಿತ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದೆಂದು ಎಚ್ಚರಿಕೆ ನೀಡಲಾಯಿತು.
ಮದ್ದೂರಿನ ಬಾರ್ ಗಳಿಗೆ ಪ್ಲಾಸ್ಟಿಕ್ ಲೋಟಗಳನ್ನೂ ಪೂರೈಸುತ್ತಿದ್ದ, ಹೋಲ್ ಸೇಲ್ ಡೀಲರ್ ನನ್ನು ನಿಷೇದಿತ ಪ್ಲಾಸ್ಟಿಕ್ ಸಮೇತ ಹಿಡಿದು, ವಶ ಪಡಿಸಿಕೊಂಡು ದಂಡ ವಿಧಿಸಲಾಯಿತು.

ಮದ್ದೂರಿನ ಪ್ರಮುಖ ಅಂಗಡಿ ಮುಗ್ಗಟುಗಳ, ಚಿಕನ್ ಸೆಂಟರ್ ಮೇಲೆ ದಾಳಿ ನಡೆಸಿ, ಪ್ಲಾಸ್ಟಿಕ್ ಲೋಟ ತಟ್ಟೆ ರೋಲ್ ಹಾಗೂ ಇನ್ನು ಇತರ ಏಕ ಬಳಕೆ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ದಂಡ ವಿಧಿಸಿ, ಪ್ಲಾಸ್ಟಿಕ್ ನಿಷೇದದ ಸೂಚನೆಯನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದರು, ಅಂಗಡಿ ಮಾಲೀಕರು ಸಹ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.
ಈ ಪ್ಲಾಸ್ಟಿಕ್ ನಿಷೇಧದ ದಾಳಿ ಮತ್ತು ಪರಿಶೀಲನೆಯಲ್ಲಿ ಪುರಸಭೆಯ ಅಧ್ಯಕ್ಷರಾದ ಸುರೇಶ್, ಮುಖ್ಯಾಧಿಕಾರಿಯಾದ ಅಶೋಕ್, ಪರಿಸರ ಆಭಿಯಂತರರಾದ ನಾಗೇಂದ್ರ ವಿ.ಜಿ. ಮತ್ತು ಆರೋಗ್ಯ ಪರೀಕ್ಷಕರಾದ ಮರಿಯ ರೋಸ್ ರವರು ಪಾಲ್ಗೊಂಡಿದ್ದರು.




