Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅ.5ಕ್ಕೆ ಕೆ.ಪಿ.ಸ್ವಾಮಿ ಅವರ ‘ರಂಗಕುಸುಮ’ ಪುಸ್ತಕ ಬಿಡುಗಡೆ

ಕೆ.ಪಿ.ಸ್ವಾಮಿ ಅವರ ಪೌರಾಣಿಕ ನಾಟಕ ಸಂಪುಟ `ರಂಗಕುಸುಮ’ ಪುಸ್ತಕ ಬಿಡುಗಡೆ ಹಾಗೂ ರಂಗಕಲಾವಿದರ ಸನ್ಮಾನ ಸಮಾರಂಭ ಕಾರ‍್ಯಕ್ರಮವನ್ನು ಅ.5ರ ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ, ಕರ್ನಾಟಕ ಸಂಘದ ಪ್ರಧಾನ ಪೋಷಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯ ಕಾರ‍್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪುಸ್ತಕ ಬಿಡುಗಡೆ ಮಾಡುವರು ಎಂದರು.

ಖ್ಯಾತ ಸಾಹಿತಿ ಡಾ.ಸಿ.ನಾಗಣ್ಣ ಪುಸ್ತಕದ ಕುರಿತು ಮಾತನಾಡಲಿದ್ದು, ನಾಟಕದ ಮೇಷ್ಟ್ರು ಖ್ಯಾತಿಯ ಲಕ್ಷ್ಮಯ್ಯ, ರಂಗಭೂಮಿ ಕಲಾವಿದರಾದ ಬಿ.ವೆಂಕಟ್, ಡಾ.ಪ್ರೇಮ್‌ಕುಮಾರ್, ಸಿ.ದೊಡ್ಡಣ್ಣಾಚಾರ್, ಅಪ್ಪಾಜಿಗೌಡ, ಅಶೋಕ ಕುಮಾರ್, ಪುಸ್ತಕ ಪ್ರಕಾಶಕ ಆನಂದ ಕೊರಟಿ ಅವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಿ.ಪಿ.ಒ.ಚಂದ್ರು ಸನ್ಮಾನಿಸುವರು. ಪುಸ್ತಕದ ಕರ್ತೃ ಕೆ.ಪಿ.ಸ್ವಾಮಿ ಉಪಸ್ಥಿತರಿರುವರು ಎಂದು ಹೇಳಿದರು.

ಅ.7ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ

ಅ.7ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಿ.ಗೌರಮ್ಮ ಚಿಕ್ಕಣ್ಣ ಸಮಾಜಸೇವಾ ಪ್ರಶಸ್ತಿ, ಸಿ.ಸುವರ್ಣ ಎಂ.ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ನುಡಿದರು.

ಹಿರಿಯ ವಕೀಲ ಬಿ.ಅಪ್ಪಾಜಿಗೌಡ ಅಧ್ಯಕ್ಷತೆಯಲ್ಲಿ ಪರಿಸರ ಪ್ರೇಮಿ ಬಿ.ಎಲ್.ಶಂಕರಪ್ಪ ಅವರಿಗೆ ಸಮಾಜ ಸೇವಾ ಪ್ರಶಸ್ತಿ, ಶಿಕ್ಷಣ ತಜ್ಞ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅವರಿಗೆ ಶೈಕ್ಷಣಿಕ ಪ್ರಶಸ್ತಿಯನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಪ್ರದಾನ ಮಾಡುವರು ಎಂದು ತಿಳಿಸಿದರು.

ಸರ್ಕಾರಿ ಸ್ವಾಯತ್ತ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಸ್.ಶಿವರಾಮು ಅಭಿನಂದನಾ ನುಡಿಗಳನ್ನಾಡಲಿದ್ದು, ಪ್ರಶಸ್ತಿ ಪ್ರಾಯೋಜಕರಾದ ಚಿಕ್ಕಣ್ಣ, ವೈಸಿ.ಚನ್ನಪ್ಪ ಉಪಸ್ಥಿತರಿರುವರು. ಸಮಾಜ ಸೇವಾ ಪ್ರಶಸ್ತಿಗೆ 25 ಸಾವಿರ ನಗದು, ಶೈಕ್ಷಣಿಕ ಪ್ರಶಸ್ತಿಗೆ 21 ಸಾವಿರ ನಗದಿನೊಂದಿಗೆ ಉಭಯ ಪುರಸ್ಕೃತರಿಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕ ಎಚ್.ಕೆ.ನಾಗಪ್ಪ, ಸದಸ್ಯ ರವಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ