Tuesday, November 24, 2026

ಪ್ರಾಯೋಗಿಕ ಆವೃತ್ತಿ

ಭೂ ಕಬಳಿಕೆ ಪ್ರಕರಣ | ಭೂಮಿ ಖರೀದಿಸಿದ್ದರೆ ದಾಖಲೆ ನೀಡಲು ಸಮಸ್ಯೆ ಏನು? : ಹೈಕೋರ್ಟ್

‘ನೀವು ಭೂಮಿ ಖರೀದಿಸಿದ್ದರೆ ಆ ದಾಖಲೆಗಳನ್ನು ಸಲ್ಲಿಸಲು ನಿಮಗೆ ಸಮಸ್ಯೆ ಏನು?’ ಎಂದು
ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಹೈಕೋರ್ಟ್ ನ್ಯಾಯಪೀಠ ಬುಧವಾರ ಪ್ರಶ್ನಿಸಿತು.

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆ ಹಾಜರುಪಡಿಸುವಂತೆ ಸೂಚಿಸಿ ತಹಶೀಲ್ದಾರ್‌ ಜಾರಿ ಮಾಡಿದ್ದ ನೋಟಿಸ್‌ ಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯ ಪೀಠ ಹೆಚ್.ಡಿ.ಕೆ ಪರ ವಕೀಲರನ್ನು ಮೇಲಿನಂತೆ ಪ್ರಶ್ನೆ ಮಾಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ ಪರ ವಕೀಲ ಹೊಳ್ಳ ಅವರು ‘ಇದೆಲ್ಲವೂ ರಾಜಕೀಯ ಪ್ರೇರಿತ ಪ್ರಕರಣ. ಇದೆಲ್ಲವನ್ನೂ ತೋರಿಸುತ್ತೇವೆ. ೪೫ ವರ್ಷಗಳ ಹಿಂದೆ ಈ ಭೂಮಿ ಖರೀದಿಸಲಾಗಿದೆ. ಒತ್ತುವರಿಯಾಗಿದ್ದರೆ ಅದನ್ನು ಸಮರ್ಥಿಸುವ ವ್ಯಕ್ತಿ ನಾನಲ್ಲ ಎಂದು ತಿಳಿಸಿದರು. ನಿಮ್ಮ ವಾದದಲ್ಲಿ ಸತ್ಯಾಂಶ ಇರಬಹುದು. ನೋಡೋಣ ಎಂದು ನ್ಯಾಯಪೀಠವು ಹತ್ತು ದಿನಗಳ ಕಾಲ ವಿಚಾರಣೆಯನ್ನು ಮುಂದೂಡಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ