Tuesday, November 24, 2026

ಪ್ರಾಯೋಗಿಕ ಆವೃತ್ತಿ

ಹೆಣ್ಣುಭ್ರೂಣ ಹತ್ಯೆಗೆ ಕಡಿವಾಣ : ಮಂಡ್ಯದಲ್ಲಿ ಲಿಂಗಾನುಪಾತ ಏರಿಕೆ

ಮಂಡ್ಯ ಜಿಲ್ಲೆಯೂ ಹೆಣ್ಣು ಭ್ರೂಣ ಹತ್ಯೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂಬ ಕುಖ್ಯಾತಿಯ ನಡುವೆ ತುಸು ಸಮಾಧಾನ ತರುವ ವಿಚಾರವೊಂದು ವರದಿಯಾಗಿದೆ. ಆರೋಗ್ಯ ಇಲಾಖೆಯ ದಿಟ್ಟ ಕ್ರಮದಿಂದ ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತ ಏರಿಕೆ ಕಂಡಿದೆ.

ಪ್ರತಿ ಸಾವಿರ ಗಂಡಸರಿಗೆ 869 ಇದ್ದ ಹೆಣ್ಣುಮಕ್ಕಳ ಸಂಖ್ಯೆ ಪ್ರಸ್ತುತ 930ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 61 ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಸರ್ಕಾರದ ಅಂಕಿ- ಅಂಶಗಳೇ ತಿಳಿಸುತ್ತಿವೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಗೆ ಅತೀ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆದ ಪರಿಣಾಮ ಲಿಂಗಾನುಪಾತದಲ್ಲಿ ತೀವ್ರ ಕುಸಿತ ಕಂಡಿತ್ತು. ಅದಲ್ಲ ಮಂಡ್ಯ, ಪಾಂಡವಪುರ, ನಾಗಮಂಗಲದಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು, ಇದರ ವಿರುದ್ದ ಆರೋಗ್ಯ ಇಲಾಖೆಯಷ್ಟೆಯಲ್ಲದೇ ಹಲವು ಸ್ವಯಂ ಸೇವಾ ಸಂಸ್ಥೆಗಳು ಸಮರ ಸಾರಿ ಜಾಗೃತಿ ಕಾರ್ಯಕ್ರಮ ನಡೆಸಿದ್ದವು.

ಇದಲ್ಲದೇ ದಂಧೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ದಿಟ್ಟ ಕ್ರಮ ಕೈಗೊಂಡು, ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಹದ್ದಿನಕಣ್ಣು ಇರಿಸಿದ್ದವು. ಮೂರು ತಿಂಗಳ ಬಳಿಕ ಸ್ಕ್ಯಾನಿಂಗ್‌ಗೆ ಬರುವ, ಮೊದಲು ಹೆಣ್ಣು ಮಗು ಹೆತ್ತ ಗರ್ಭಿಣಿಯರ ಮೇಲೆ ನಿಗಾ ಇರಿಸಲಾಗಿತ್ತು.

ಡೆಕಾಯ್ ಆಪರೇಷನ್ ಮೂಲಕ ದಂಧೆಕೋರರ ಹೆಡೆಮುರಿಕಟ್ಟಲು ಆರೋಗ್ಯ ಇಲಾಖೆ ಕ್ರಮ ವಹಿಸಿತ್ತು. ಭ್ರೂಣ ಪತ್ತೆಗೆ ಇಲಾಖೆಯಿಂದಲೇ ಓರ್ವ ಗರ್ಭಿಣಿ ನೇಮಕ ಮಾಡಿಕೊಂಡು, ಭ್ರೂಣ ಪತ್ತೆ ವೇಳೆ ಆರೋಪಿಗಳ ಬಂಧನ ಮಾಡಿದ್ದು, ದಂಧೆಗೆ ಕಡಿವಾಣ ಹಾಕಲು ಪ್ರಮುಖ ಕಾರಣವಾಗಿತ್ತು. ಇದೆಲ್ಲದರ ಪರಿಣಾಮ ಮಂಡ್ಯ ಜಿಲ್ಲೆಯಲ್ಲಿ ಲಿಂಗಾನುಪಾತ ಏರಿಕೆಯಾವುದಕ್ಕೆ ಕಾರಣವಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ