Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದರಲ್ಲಿ ತಪ್ಪೇನಿದೆ? : ಬಿ.ಎಸ್.ಶಿವಣ್ಣ

ನೋಂದಣಿ ಮಾಡಿಕೊಳ್ಳದೆ, ಕೈಯಲ್ಲಿ ದೊಣ್ಣೆ ಹಿಡಿದು,ತಾರತಮ್ಯದ ಮನುವಾದವನ್ನೇ ಒಡಲಲ್ಲಿ ತುಂಬಿಕೊಂಡು, ಕೋಮುವಾದ, ಜಾತಿ-ಜಾತಿಗಳ ನಡುವೆ ದ್ವೇಷ, ಜನರ ಭಾವನೆ ಕೆರಳಿಸಿ, ಬೆಂಕಿ ಹಚ್ಚುವ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿರುವ ಆರೆಸ್ಸೆಸ್ ಚಟುವಟಿಕೆಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ಕೊಡಬಾರದೆಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್.ಶಿವಣ್ಣ ಪ್ರಶ್ನಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇವಲ ಶೇ.3ರಷ್ಟು ಜನಸಂಖ್ಯೆ ಹೊಂದಿರುವ ಬ್ರಾಹ್ಮಣರು ಬಹುಸಂಖ್ಯಾತರನ್ನು ಆಳಲು ಇದು ಊಳಿಗಮಾನ್ಯ ಪದ್ಧತಿಯಲ್ಲ. ಸಂವಿಧಾನದ ಸಮಾನತೆಯ ಭದ್ರ ತಳಹದಿಯ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರ್ಮಿಸಿರುವ ಪ್ರಜಾಪ್ರಭುತ್ವ.
ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿರುವವರು ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಬೇಕು. ಸರ್ವಾಧಿಕಾರಿ ಧೋರಣೆಯಿಂದ ವಿರೋಧಿಗಳನ್ನೆಲ್ಲ ಬಗ್ಗು ಬಡಿದು, ಸತ್ಯ ಮರೆಮಾಚಿ, ನನ್ನಿಂದಲೇ ನಿಮ್ಮ ಉದ್ಧಾರ, ದೇವರೇ ನನ್ನ ಕಳುಹಿಸಿದ್ದಾನೆ ಎಂದು ಹೇಳಿದ, ಹಿಟ್ಲರ್, ಸದ್ದಾಂ ಹುಸೇನ್, ಗಡಾಫಿ, ಮುಸಲೋನಿ ಇವರೆಲ್ಲ ಕೊನೆಗೆ ಏನಾದರು ಎಂಬುದನ್ನು ತಿಳಿಯಲಿ.

ಮೋಸ, ತಂತ್ರ, ಕುತಂತ್ರಗಳಿಂದ ಅಮಾಯಕರ ಮಕ್ಕಳನ್ನು ಮುಂದೆ ಬಿಟ್ಟು ಕೊಲ್ಲಿಸಿ, ಜೈಲಿಗಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತಹ ನೀಚ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಬಿ.ಎಸ್.ಶಿವಣ್ಣ ಆಗ್ರಹಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ