ಕಾವೇರಿ ನದಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಋಣ ನಮ್ಮ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಕೆ.ಆರ್.ಎಸ್.ಬಳಿ ಕಾವೇರಿ ಆರತಿಯನ್ನು ಸರ್ಕಾರ ಸಾಂಪ್ರದಾಯಿಕ ಕಾರ್ಯಕ್ರಮ, ಹಬ್ಬವನ್ನು ಪ್ರಾರಂಭ ಮಾಡಿದೆ, ಮುಂದಿನ ದಿನಗಳಲ್ಲೂ ನಡೆಯಲಿ ಎಂಬುದು ನಮ್ಮ ಬಯಕೆ, ಇದರಿಂದ ಮಂಡ್ಯದ ಪ್ರವಾಸೋಧ್ಯಮ ಬೆಳೆಯಲಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯ ತೋಟಗಾರಿಕೆ ರಸ್ತೆಯಂಚಿನಲ್ಲಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಮಂಡ್ಯ ಆಯೋಜಿಸಿದ್ದ ತಲಾಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಪ್ರಯುಕ್ತ ಕಾವೇರಿ ಮಾತೆಗೆ ಪೂಜೆ, ಅಭಿನಂದನೆ ಮತ್ತು ಅನ್ನಸಂತರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿ ಮಾತನಾಡಿದರು.
ತಲಕಾವೇರಿ ತೀಥೋದ್ಭವ ನಡೆಯುವ ಸಂದರ್ಭದಲ್ಲಿ ಮಂಡ್ಯದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾವೇರಿ ಮಾಲಿನ್ಯ ತಡೆಯುವಲ್ಲಿ ಜನರು ಮುಂದಾಗಬೇಕು, ನಾಲೆಗಳಿಗೆ ತ್ಯಾಜ್ಯವನ್ನು ಎಸೆಯುವುದು ಎಚ್ಚಾಗುತ್ತಿದೆ, ನಾಲೆಗಳು,ಕಾಲುವೆಗಳು ಒತ್ತುವರಿಯಾಗುತ್ತಿದೆ, ಇದೆಲ್ಲ ನಿಲ್ಲಬೇಕು ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ನೇತೃತ್ವದಲ್ಲಿ ಪ್ರಗತಿಪರ ರೈತರ ಜೊತೆಗೂಡಿ, ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾಲೆಗಳ ಸ್ವಚ್ಚತೆ ಆಗಲಿ, ಕೆರೆಕಟ್ಟೆಗಳ ಉಳಿವಿಗಾಗಿ, ನೀರುಸಂಗ್ರಹಕ್ಕಾಗಿ ಹೂಳೇತ್ತುವ ಕಾರ್ಯ ಸಾಗಲಿ ಎಂದು ಸಲಹೆ ನೀಡಿದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳ ವೆಂಕಟೇಶ್, ಪ್ರತಿವರ್ಷ ತಲಕಾವೇರಿ ತೀರ್ಥೋದ್ಬವ ಕಾರ್ಯಕ್ರಮ ನಡೆಯುತ್ತಿದೆ, ಮಂಡ್ಯದಲ್ಲಿಯೇ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡಲು ನಿರ್ದರಿಸಿ ಕಾರ್ಯ ಸಾಗುತ್ತಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿತ್ವದಿಂದ ನಾಡಿನಲ್ಲಿ ಅವಿಸ್ಮರಣೀಯ ಯೋಜನೆಗಳು ಕಾರ್ಯಗತಗೊಂಡವು, ರಾಜಮನೆತನ ಯುದ್ದ ಮಾಡದೆ, ಅಭಿವೃದ್ದಿ ಕಾರ್ಯ ಮಾಡಿ ಸಾಧನೆ ಮಾಡಿದೆ, ಬಹುಸಂಖ್ಯಾತರ ಉದ್ದಾರಕ್ಕಾಗಿ ಮೀಸಲಾತಿ ನೀಡಿ ಉದ್ಯೋಗ ನೀಡಿ ಕೀರ್ತಿಶ್ರೇಯರನ್ನು ಮರೆಯಲಾಗದು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್.ಕೃಷ್ಣ ಮತ್ತು ಮನ್ಮುಲ್ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಗಣ್ಯರು ಅಭಿನಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ಉದ್ಯಾನವನದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಮತ್ತು ದೀಪನಮನ ಸಲ್ಲಿಸಲಾಯಿತು. ಜಾನಪದ ಕಲಾತಂಡಗಳ ಮೇಳೆದೊಂದಿಗೆ ಗಣ್ಯರನ್ನು ವೇದಿಕೆಗೆ ಕರತರಲಾಯಿತು. ಬೃಹತ್ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮನಂದನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭುನAದನಾಥಸ್ವಾಮೀಜಿ, ಬಿಜಿಎಸ್ ಶಾಖೆಯ ಸತ್ಕೀರ್ತಿನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಂ.ಶ್ರೀನಿವಾಸ್, ಕರ್ನಾಟಕಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ಗೌಡ,ನಗರಸಭಾ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ಕುಮಾರ್, ರಕ್ತದಾನಿ ಮಂಗಲ ಲಂಕೇಶ್, ಚಂದ್ರಶೇಖರ್, ಜಗದೀಶ್, ಟಿ.ಡಿ,ನಾಗರಾಜು, ನಾಗರತ್ನ ಮತ್ತಿತರರಿದ್ದರು.




