ಒಟ್ಟು 17 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ಮಂಡ್ಯ ಗಾಂಧಿನಗರದ ಅಜಯ್ ಅಲಿಯಾಸ್ ಚಿಕ್ಕಬೆಣ್ಣೆ ಎಂಬುವನ ವಿರುದ್ದ ಮಂಡ್ಯ ಪೊಲೀಸರು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಬಳ್ಳಾರಿ ಜೈಲಿನ ವಶಕ್ಕೆ ನೀಡಿದ್ದಾರೆ.
ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾದ ಗಾಂಧಿನಗರದ ಅಜಯ್ ಅಲಿಯಾಸ್ ಚಿಕ್ಕಬೆಣ್ಣೆ ವಿರುದ್ಧ ವಿವಿಧ ಠಾಣೆಗಳಲ್ಲಿ ಗಂಭೀರ ಸ್ವರೂಪದ ಹಲ್ಲೆ, ಕೊಲೆ ಪ್ರಯತ್ನ, ದರೋಡೆ ಯತ್ನ ಸೇರಿದಂತೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದ ಹಿನ್ನಲೆಯಲ್ಲಿ ಜೈಲಿಗೆ ಕಳುಹಿಸಲಾಗಿದೆ.
ಈತನ ರೌಡಿ ಚಟುವಟಿಕೆಯನ್ನು ನಿಯಂತ್ರಿಸಿ ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಾಪಾಡುವ ಸಲುವಾಗಿ ಮಂಡ್ಯ ಪೊಲೀಸ್ ಅಧೀಕ್ಷಕರ ವರದಿಯ ಮೇರೆಗೆ ಮಂಡ್ಯ ಜಿಲ್ಲಾ ಜಿಲ್ಲಾಧಿಕಾರಿಗಳು, ಗೂಂಡಾ ಕಾಯ್ದೆ ಅನ್ವಯ ನೀಡಿದ ಆದೇಶದ ಮೇರೆಗೆ ಈತನನ್ನು ಬಂಧಿಸಿ ಅ.24 ಬಳ್ಳಾರಿ ಕೇಂದ್ರ ಕಾರಾಗೃಹದ ವಶಕ್ಕೆ ನೀಡಲಾಗಿದೆ.




