Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಮಲ್ಲೇನಹಳ್ಳಿ ಬಳಿ ಬೋನಿಗೆ ಬಿದ್ದ ಚಿರತೆ

ವರದಿ : ರಂಗನಾಥ್ ಮಾಕವಳ್ಳಿ

ಕೆ.ಆರ್.ಪೇಟೆ ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆಯು ಇರಿಸಿದ್ದ ಬೋನಿಗೆ ಎರಡು ವರ್ಷದ ಚಿರತೆ ಸೆರೆಯಾಗಿದೆ.

ಮಲ್ಲೇನಹಳ್ಳಿ ಗ್ರಾಮದ ರಾಜೇಗೌಡರ ಮಗ ಮಂಜೇಗೌಡರಿಗೆ ಸೇರಿದ ಜಮೀನಿನಲ್ಲಿ ಹಲವು ದಿನಗಳಿಂದ ಚಿರತೆಯು ರೈತರಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಅರಣ್ಯ ಇಲಾಖೆಯ ಆರ್.ಎಫ್.ಓ. ಅನಿತಾ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಬೋನು ಇಡಲಾಗಿತ್ತು.

ಶನಿವಾರ ಮುಂಜಾನೆ ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. ಇದರಿಂದ ಮಲ್ಲೇನಹಳ್ಳಿ, ಕುಂದನಹಳ್ಳಿ, ಬಿ.ಬಿ.ಕಾವಲು, ಬಂಡಿಹೊಳೆ, ಸಾಧುಗೋನಹಳ್ಳಿ ಮತ್ತಿತರ ಗ್ರಾಮಗಳ ರೈತರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ನಂದಕುಮಾರ್, ಪ್ರಶಾಂತ್, ಸಿಬ್ಬಂದಿ ವರ್ಗದವರಾದ ಸಂಜಯ್, ರಂಗಸ್ವಾಮಿ, ಶ್ರೀಧರ್, ಚಿರತೆ ಕ್ರಿಪ್ರ ಕಾರ್ಯಪಡೆ ಸಿಬ್ಬಂದಿಗಳಾದ ಅಭಿಲಾಷ್, ನಿರಂಜನ್, ರಾಜೇಶ್, ಕಾರ್ತಿಕ್, ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಬಂಡೀಪುರ ಚಿರತೆ ವನ್ಯಜೀವಿ ಅರಣ್ಯ ಸುರಕ್ಷಿತವಾಗಿ ಬಿಡಲಾಯಿತು  ಎಂದು ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಅವರು ತಿಳಿಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಅವರು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಎಲ್ಲೆ ಚಿರತೆಗಳು ಕಾಣಿಸಿಕೊಂಡರೂ ತಕ್ಷಣ ನಮಗೆ ಮಾಹಿತಿ‌ ನೀಡಬೇಕು. ಇಲಾಖೆಯ ವತಿಯಿಂದ ಚಿರತೆಯನ್ನು ಹಿಡಿದು ವನ್ಯಜೀವಿ ಅರಣ್ಯಕ್ಕೆ ಬಿಡಲು ಸೂಕ್ತ ಕ್ರಮವಹಿಸುತ್ತೇವೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ