ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಕನ್ನಡವನ್ನು 60% ರಷ್ಟು ನಾಮಫಲಕದಲ್ಲಿ ಕಡ್ಡಾಯಗೊಳಿಸಬೇಕೆಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಎಂದು ನಗರಸಭೆ ಅಧ್ಯಕ್ಷರು ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ರಾಜ್ಯದಾದ್ಯಂತ ವರ್ತಕರು ಹಾಕುವ ನಾಮಫಲಕದಲ್ಲಿ 60% ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಬೇಕೆಂದು ಆದೇಶ ಮಾಡಿದೆ. ಆದರೆ ಮಂಡ್ಯ ಜಿಲ್ಲಾ ವರ್ತಕರು ಹಾಗೂ ಸರ್ಕಾರದಿಂದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ನಾಮಫಲಕಗಳಲ್ಲಿ ಕನ್ನಡ ಪದಗಳೇ ತಪ್ಪಾಗಿದೆ. ಬಹುದಿನದಿಂದ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಆಡಳಿತಕ್ಕೆ ಮತ್ತು ಸರ್ಕಾರಕ್ಕೆ ಹಾಗೂ ನಗರಸಭೆಗೆ ಮನವಿ ಮತ್ತು ಹೋರಾಟಗಳ ಮೂಲಕ ಅಗ್ರಹ ಮಾಡಿದರೂ ನಾಮಫಲಕಗಳು ಮಾತ್ರ ಕನ್ನಡ ಕಡ್ಡಾಯಗೊಳಿಸುವುದರಲ್ಲಿ ಜಿಲ್ಲಾ ಆಡಳಿತ ಹಿಂದೆ ಬಿದ್ದಿದೆ ಎಂದು ದೂರಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಮಂಡ್ಯ ನಗರಸಭೆಯ ಆಯುಕ್ತರು ಈಗಾಗಲೇ ವರ್ತಕರಿಗೆ ನೋಟೀಸ್ ನೀಡುತ್ತಿದ್ದಾರೆ. ನಿಮ್ಮ ನೋಟೀಸ್ಗಳಿಗೂ ಕ್ಯಾರೆ ಎನ್ನದೆ ವರ್ತಕರು ಮತ್ತು ಅಧಿಕಾರಿಗಳು 100 ರಷ್ಟು ಬದಲಾವಣೆಗಳಾಗಬೇಕಾದ ನಾಮಫಲಕಗಳು ಕೇವಲ ಶೇ. 40% ರಷ್ಟು ಬದಲಾವಣೆ ಆಗಿರುವುದು ನೋಡುತ್ತಿದ್ದೇವೆ. ರಾಜ್ಯೋತ್ಸವ ಹಬ್ಬಕ್ಕೆ ಒಂದು ದಿನ ಬಾಕಿ ಇರುವ ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರು ಮತ್ತು ಆಯುಕ್ತರು ನಾಮಫಲಕಗಳನ್ನು ಬದಲಾವಣೆ ಮಾಡದೆ ಇರುವ ವರ್ತಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳುವ ಆದೇಶವನ್ನು ಇಂದೇ ಮಾಡಬೇಕೆಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಆಗ್ರಹ ಮಾಡಿದರು.
ಇನ್ನು 15 ದಿನದ ಒಳಗಡೆ ನಾಮಫಲಕಗಳನ್ನು ಬದಲಾವಣೆ ಮಾಡದಿದ್ದರೆ ಕನ್ನಡ ಸೇನೆ ಕರ್ನಾಟಕ ಉಗ್ರ ಹೋರಾಟ ಮಾಡುತ್ತದೆ. ನವೆಂಬರ್ 15 ರಂದೇ ಕನ್ನಡ ಜಾಗೃತಿ ಸಮಾವೇಶ ಮಾಡುತ್ತಿದ್ದೇವೆ. ಸಮಾವೇಶಕ್ಕೆ ಬರುವ ಎಲ್ಲಾ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ನಗರಸಭೆ ಮುಂದೆ ಜಮಾವಣೆಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಮಹಿಳಾ ಅಧ್ಯಕ್ಷ ಸೌಭಾಗ್ಯ, ನಗರಾಧ್ಯಕ್ಷ ಉಬೇದವುಲ್ಲಾ, ಉಪಾಧ್ಯಕ್ಷ ಪ್ರಸನ್ನ. ಸಂಚಾಲಕ ವೇಣುಗೋಪಾಲ್, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ರಘು, ಜಿಲ್ಲಾ ಸಂಚಾಲಕ ಅಭಿಷೇಕ್, ಕನ್ನಡ ಮುಖಂಡರಾದ ಶಾಲಿನಿ, ಮಂಗಳಮ್ಮ, ಪಾಂಡುರಂಗ, ಯರಹಳ್ಳಿ ಕುಮಾರ್, ರಮೇಶ್ಮ ಮಹಾಂತಪ್ಪ, ಸತೀಶ್ ಹಾಗೂ ನಾಗಮ್ಮ ಉಪಸ್ಥಿತರಿದ್ದರು.




