ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕಕ್ಕೆ ನ.9ರಂದು ಚುನಾವಣೆಯಲಿದ್ದು, ವಿವಿಧ ಸ್ಥಾನಗಳಿಗೆ ಅಂತಿಮವಾಗಿ 45 ಮಂದಿ ಸ್ಪರ್ಧಾಕಣದಲ್ಲಿ ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವನಂಜಯ್ಯ ತಿಳಿಸಿದರು.
ಮಂಡ್ಯ ಜಿಲ್ಲಾ ಘಟಕದ 24 ಹಾಗೂ ಒಂದು ರಾಜ್ಯ ಕಾರ್ಯಕಾರಿ ಸಮಿತಿಯ ಸ್ಥಾನಗಳಿಗೆ 83 ನಾಮಪತ್ರಗಳ ಸಲ್ಲಿಕೆಯಾಗಿದ್ದವು. ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಕಾರಣ ಸ್ಪರ್ಧೆಯಲ್ಲಿ ಉಳಿದಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಮಪತ್ರ ಹಿಂಪಡೆದ ನಂತರ ಅಧ್ಯಕ್ಷರ ಹುದ್ದೆಗೆ ಜೆ.ಎಂ.ಬಾಲಕೃಷ್ಣ ಹಾಗೂ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಿ.ಶಶಿಧರ, ಕೆ.ಶಂಭುಲಿಂಗೇಗೌಡ, ಖಜಾಂಚಿ ಹುದ್ದೆಗೆ ಎಲ್.ಸಿದ್ದರಾಜು, ಆರ್.ಎನ್.ನಂಜುಂಡಸ್ವಾಮಿ, ಉಪಾಧ್ಯಕ್ಷ ಹುದ್ದೆಗೆ ರವಿ ಸಾವಂದಿಪುರ, ಸಿ.ಎ.ಲೋಕೇಶ್, ಸಿ.ಎ.ಉಮೇಶ್, ಕೆ.ಸಿ.ಮಂಜುನಾಥ್, ಎ.ಎಲ್.ಸತೀಶ್ (ಅಣ್ಣೂರು ಸತೀಶ್), ನವೀನ, ರವಿ.ಕೆ (ರವಿ ಲಾಲಿಪಾಳ್ಯ) ಕಾರ್ಯದರ್ಶಿ ಹುದ್ದೆಗೆ ಹೆಚ್.ಕೆ.ಅಶ್ವಥ್, ಕೆ.ಎನ್.ನಾಗೇಗೌಡ, ಎನ್.ನಾಗರಾಜು, ಶಿವರಾಜು.ಹೆಚ್ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಹುದ್ದೆಗೆ ಸಿ.ಎನ್.ಮಂಜುನಾಥ್ ಹಾಗೂ ಸುನೀಲ್‌ಕುಮಾರ್.ಹೆಚ್.ಬಿ ಸ್ಪರ್ಧಿಸಲಿದ್ದಾರೆ ಎಂದರು.
ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ಅಶೋಕ.ಎನ್, ಆನಂದ.ಸಿ (ಸಾಯಿ ಟಿ.ವಿ), ಚೇತನ್‌ಕುಮಾರ್.ಎ.ಬಿ, ದೀಪಕ್.ಸಿ.ಎಸ್, ಹೇಮಂತ್‌ರಾಜ್.ಆರ್‌ಎಸ್, ಕೆ.ಎನ್.ಪುಟ್ಟಲಿಂಗೇಗೌಡ, ಕೃಷ್ಣ.ಎ, ಕುಮಾರಸ್ವಾಮಿ, ಎಂ.ಜಯಶಂಖರ್ (ಜಯಣ್ಣ), ಮೋಹನ್‌ಕುಮಾರ್, ನಾಗೇಶ.ಎಂ, ಪುಟ್ಟಸ್ವಾಮಿ.ಎಸ್, ರವಿಕುಮಾರ್.ಎಂ.ಸಿ, ರವಿನಂದನ್.ಎಂ, ರೋಹಿತ್.ಡಿ.ಡಿ, ಎಸ್.ಸಿ.ಸಂತೋಷ್, ಎಸ್.ಡಿ.ವೇಣುಗೋಪಾಲ್, ಎಸ್.ರಾಘವೇಂದ್ರ, ಸಿದ್ದೇಗೌಡ, ಶಶಿಧರ್‌ಸಿಂಗ್.ಎಸ್.ಸಿ, ಶೇಷಣ್ಣ.ಎಂ, ಶಿವಶಂಕರ್.ಎಲ್, ಸೌಮ್ಯ.ಆರ್, ತೇಜಸ್ವಿ.ಕೆ.ಎಸ್, ವಿನಯ್.ಕೆ.ಆರ್, ವಿನೋದ.ಕೆ ಅವರುಗಳು ಸ್ಪರ್ಧೆ ಎದುರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ಹಾಜರಿದ್ದರು.




