ಮಂಡ್ಯ ಕರ್ನಾಟಕ ರತ್ನ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ದೇಶಕ್ಕೆ ಸಲ್ಲಿಸಿರುವ ಸೇವೆ ಅಪಾರ. ಅವರ ಆದರ್ಶ ಬದುಕು ಎಲ್ಲರಿಗೂ ಬೆಳಕಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಬಣ್ಣಿಸಿದರು.
ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಕಾಯಕ ಯೋಗಿ ಫೌಂಡೇಷನ್ನಿಂದ ಆಯೋಜಿಸಿದ್ದ ಧ್ಯಾನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಧ್ಯಾನ ಮತ್ತು ಯೋಗಾಭ್ಯಾಸಕ್ಕಾಗಿ ನಿರ್ಮಾಣ ಮಾಡಿರುವ ಧ್ಯಾನಕೇಂದ್ರದಲ್ಲಿ ನೆಮ್ಮದಿಯ ವಾತಾವರಣವಿದೆ. ಸ್ವಾಮೀಜಿ ಅವರ ಪುತ್ಥಳಿಯ ಮುಂದೆ ಧ್ಯಾನ ಮಾಡುವ ಮೂಲಕ ಮನಶಾಂತಿ ಕಂಡುಕೊಳ್ಳಬೇಕು ಎಂದರು.
ಕಾಯಕಯೋಗಿ ಫೌಂಡೇಷನ್ ಅತ್ಯುತ್ತಮ ಕೆಲಸ ಮಾಡಿಕೊಂಡು ಬಂದಿದೆ. ನಡೆದಾಡುವ ದೇವರೆಂದೇ ಪ್ರಸಿದ್ದಿ ಯಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಈ ಉದ್ಯಾನದಲ್ಲಿ ಜೀವಂತ ವಾಗಿಡುವ ಕೆಲಸ ಮಾಡಿದ್ದಾರೆ. ಪ್ರತಿ ವರ್ಷವೂ ಇಂತಹ ಸ್ಮರಣೀಯ ಕಾರ್ಯಕ್ರಮಗಳು ನಡೆಯಲಿ. ಶಿವಕುಮಾರ ಸ್ವಾಮೀಜಿ ಅವರ ಆದರ್ಶ ನಮಗೆಲ್ಲರಿಗೂ ಬೆಳಕಾಗಲಿ. ಈ ಸಮಾಜಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರು ಕೊಟ್ಟ ಕೊಡುಗೆ ಆದರ್ಶನೀಯವಾದದ್ದು. ಅವರ ಮಾರ್ಗದರ್ಶನ ದಲ್ಲಿ ನಾವೆಲ್ಲರೂ ಸಾಗುವಂತಾಗಬೇಕು ಎಂದರು.
ಆ ನಿಟ್ಟಿನಲ್ಲಿ ಈ ಸ್ಥಳ ಧ್ಯಾನ ಕೇಂದ್ರವಾಗಿ ರೂಪುಗೊಂಡಿರುವುದು ಮಾದರಿಯಾಗಿದೆ ಎಂದರು. ಈ ಧ್ಯಾನ ಕೇಂದ್ರ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಹಲವರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಉದ್ಯಾನದಲ್ಲಿ ಬೇರೇನೊ ಚಟುವಟಿಕೆ ಮಾಡುತ್ತಾರೆಂಬ ಅನಿಸಿಕೆ ಹಲವರಿಂದ ಕೇಳಿ ಬಂದಿತ್ತು. ಆದರೆ ನನಗೆ ವಿಶ್ವಾಸವಿತ್ತು. ಕಾಯಕ ಯೋಗಿ ಫೌಂಡೇಷನ್ನ ಎಂ.ಶಿವ ಕುಮಾರ್ ಸ್ವಾಮೀಜಿ ಅವರ ಆದರ್ಶದಲ್ಲಿ ಬೆಳೆದ ವರು ಎಂದು ಅನುಮತಿ ಕೊಡಿಸಿದೆ. ಇದೀಗ ಅವರು ಹೇಳಿದಂತೆಯೇ ಧ್ಯಾನ ಮಂದಿರ ರೂಪು ಗೊಂಡಿದೆ ಎಂದರು.
ಬೇಬಿಬೆಟ್ಟದ ಶಿವಬಸವ ಸ್ವಾಮೀಜಿ, ಶಿವಶಂಕರ ಸ್ವಾಮೀಜಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಫೌಂಡೇಷನ್ನ ಎಂ.ಶಿವ ಕುಮಾರ್, ನಗರಸಭೆ ಸದಸ್ಯೆ ಕೆ.ವಿದ್ಯಾ ಮಂಜು ನಾಥ್, ಅನಿಲ್ ಕುಮಾರ್, ಶ್ರೀಧರ್, ಕಾಂಗ್ರೆಸ್ ಮುಖಂಡ ಶಿವನಂಜು, ಜೆಡಿಎಸ್ ಮುಖಂಡ ಎಂ.ಆರ್.ಮಂಜುನಾಥ್, ಬಿಜೆಪಿ ಮುಖಂಡ ಅರವಿಂದ್, ರಾಮಲಿಂಗು, ಕನ್ನಡ ಸೇನೆ ಅಧ್ಯಕ್ಷ ಎಚ್.ಸಿ.ಮಂಜುನಾಥ್, ಸೋಮಣ್ಣ, ಅನುಪಮಾ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್, ಮೆಣಸಗೆರೆ ಶಿವ ಲಿಂಗಪ್ಪ, ಎಚ್. ಎಸ್.ಶಿವರುದ್ರಪ್ಪ, ಜಿ.ಮಹಾಂತಪ್ಪ, ಸೋಮಶೇಖರ್, ತಿಲಕ್ ಮತ್ತಿತರರಿದ್ದರು.




