Friday, November 20, 2026

ಪ್ರಾಯೋಗಿಕ ಆವೃತ್ತಿ

‘ಡಿಕೆಶಿ ಅವರನ್ನ ಸಿಎಂ ಮಾಡಲು ಹೊರಟವರು, ಛತ್ರಿಗಳು ಅಂದ್ರೇನು ಅರ್ಥ ತಿಳ್ಕೊಬೇಕು’ : ನಿಖಿಲ್ ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯ ಶಾಸಕರು ಡಿಕೆ ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ. ಅವರು ಮಂಡ್ಯ ಜಿಲ್ಲೆಗೆ ಏನು ಬಿರುದು ಕೊಟ್ಟರು ಗೊತ್ತಾ ?, ಛತ್ರಿಗಳು ಅಂದ್ರು… ಅದರ ಅರ್ಥ ತಿಳಿದಿಕೊಳ್ಳಬೇಕು ಎಂದು ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಮದ್ದೂರು ತಾಲ್ಲೂಕಿನ ದೇವೇಗೌಡನ ದೊಡ್ಡಿಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಹೆಚ್.ಡಿ.ಕೆ ಅಭಿಮಾನಿಯೊಬ್ಬರ ಮನೆ ಭೇಟಿ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಹಾರ ಫಲಿತಾಂಶದ ನಂತರವು, ಕಾಂಗ್ರೆಸ್ ನ ಇನ್ನು ರಾಷ್ಟ್ರೀಯ ಪಕ್ಷ ಅನ್ಕೊಂಡಿದ್ದಾರಾ? ಕುಮಾರಣ್ಣ ಸಿಎಂ ಆಗಲಿ ಬಿಡಲಿ. ಈ ಬಗ್ಗೆ ಚಲುವರಾಯಸ್ವಾಮಿ ಅವರಿಗೆ ಯಾಕೆ ಆತಂಕ ?.  ಇನ್ನೂ ಎರಡೂವರೆ ವರ್ಷ ಇದೆ.
ಯಾವ ನಾಯಕತ್ವದಲಿ ಚುನಾವಣೆ ನಡೆಯಬೇಕು ಅಂತ ತೀರ್ಮಾನ ಮಾಡೋದು ಎನ್‌ಡಿಎ.ಕುಮಾರಣ್ಣ ಅರ್ಜಿ ಹಾಕೊಂಡು ಹೋಗಿಲ್ಲ, ಸ್ವಾಭಿಮಾನದಿಂದ ಬದುಕಿದ್ದಾರೆ ಎಂದರು.

ಜೆಡಿಎಸ್ ಬಗ್ಗೆ ಕೀಳಾಗಿ ಮಾತನಾಡಿದ್ರು

ಜೆಡಿಎಸ್ 18 ಸೀಟು ತಗೊಂಡಿದೆ, ಮುಂದೆ ಸಿಂಗಲ್ ಡಿಜಿಟ್ ಗೆ ಬರುತ್ತೆ, ಅಸ್ತಿತ್ವ ಇಲ್ಲ ಅಂತ ಲೇವಡಿ ಮಾಡಿದ್ರು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು ?. ಅಲ್ಲಿನ ಜನರು ಕಾಂಗ್ರೆಸ್ ಪರಿಸ್ಥಿತಿ ತೋರಿಸಿದ್ದಾರೆ. ನವೆಂಬರ್‌ ಕ್ರಾಂತಿ ಯಾರು ಮುಖ್ಯಮಂತ್ರಿ ಸೀಟ್ ಆಸೆ ಇಟ್ಟುಕೊಂಡಿದ್ದಾರೊ? ಯಾರು ಸೀಟ್ ಬಿಟ್ಟು ಕೊಡ್ತಾರೋ? ಯಾರನ್ನ ಕೂರಿಸ್ತಾರೋ ಗೊತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲಬೇಕು. ಎರಡೂವರೆ ವರ್ಷದಲ್ಲಿ 5 ಲಕ್ಷ ಕೋಟಿ ಹೆಚ್ಚು ಸಾಲ. ಇದು ಕಾಂಗ್ರೆಸ್ ಆಡಳಿತ ವಾಗಿದೆ ಎಂದರು.

ಕುಮಾರಸ್ವಾಮಿಗೆ ಬಂಡವಾಳ ಇಲ್ಲಂದ್ರೆ ಪಾಪಾ ಲೋಕಸಭಾ ಚುನಾವಣೆಯಲ್ಲಿ ನೋಡಿರಬೇಕು.
ಕುಮಾರಸ್ವಾಮಿ ಅವರಿಗೆ 11 ಕ್ಷೇತ್ರ ಹೇಗೆ ಗೆಲ್ತು? ದಾಖಲೆ ಪ್ರಮಾಣದಲ್ಲಿ ನಾವು ನಿಂತಿದ್ದೇವೆ.
ದೊಡ್ಡ ಬಹುಮತದಿಂದ ಜನರು ಅಯ್ಕೆ ಮಾಡಿದ್ದಾರೆ. ರಾಜ್ಯದ ಜನತೆ ಕುಮಾರಣ್ಣ ಗೆ ಶಕ್ತಿ ತುಂಬಿದ್ದಾರೆ.
ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ, ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲ್ಲ. ಮದ್ದೂರು ತಾಲ್ಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ? ಇಲ್ಲಿರುವ ಶಾಸಕರು ನಡವಳಿಕೆ ಸರಿಯಿಲ್ಲ ಎಂದರು.

ಅಭಿಮಾನಿ ಕುಟುಂಬಕ್ಕೆ ಸಾಂತ್ವಾನ

ಹೆಚ್ಡಿಕೆ ಅಪ್ಪಟ ಅಭಿಮಾನಿ ಮಹದೇವು ಆತ್ಮಹತ್ಯೆ ಹಿನ್ನಲೆ ಅವರ ನಿವಾಸಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ಕುಟುಂಬಸ್ಥರಿಗೆ ನಿಖಿಲ್ ಸಾಂತ್ವನ ಹೇಳಿ,ಆರ್ಥಿಕ ನೆರವು ನೀಡಿದರು.
ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿ ಮಹದೇವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಎಂದು ನಮಗೆ ಅರ್ಥವಾಗ್ತಿಲ್ಲ. ಹೋದ ಜೀವ ವಾಪಸ್ಸು ತರಲು ಸಾಧ್ಯವಿಲ್ಲ. ನನಗೆ, ಕುಮಾರಣ್ಣಗೆ ಈ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಕುಮಾರಣ್ಣ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಎಂದಿದ್ದರು.
ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿಯನ್ನ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಜೀವನೋಪಾಯಕ್ಕೆ ನೆರವು ನೀಡುತ್ತೇವೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ