ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಂಡ್ಯ ತಾಲೂಕಿನಲ್ಲಿ ಹೊಸದಾಗಿ 3 ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭಗೊಳ್ಳಲಿವೆ ಎಂದು ಶಾಸಕ ರವಿಕುಮಾರ್‌ಗೌಡ ಹೇಳಿದರು.
ಮಂಡ್ಯ ನಗರದ ಗುತ್ತಲು ಬಡಾವಣೆಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗ, ಅರಕೇಶ್ವರ ನಗರ ದÀಕ್ಷಿಣವಲಯ, ಮಂಡ್ಯ ೩ಮತ್ತು ೪ಕ್ಲಸ್ಟರ್‌ಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ತಾಲೂಕಿನ ಉಮ್ಮಡಹಳ್ಳಿ, ಚಿಕ್ಕಮಂಡ್ಯ, ಬೇಬಿ ಗ್ರಾಮಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜುರಾಗಿವೆ, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇವೆ ಎಂದು ನುಡಿದರು.
ಪಠ್ಯ ಕಲಿಕೆಯೊಂದಿಗೆ ಪ್ರತಿಭೆಗಳು ಇರಬೇಕು, ಓದಿದರೆ ಮಾತ್ರ ಕೆಲಸ್ಸ ಸಿಗದು, ಓದಿನೊಂದಿಗೆ ಕೌಸಲ್ಯಜ್ಞಾನವಿರಬೇಕು, ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅನಾವರಣಗೊಳಿಸಿದರೆ ಉತ್ತಮ ಪ್ರಜೆಯಾಗುತ್ತಾರೆ ಎಂದು ಸಲಹೆ ನೀಡಿದರು.
ಖಾಸಗಿ ಶಾಲೆಗಳ ವ್ಯಮೋಹ ಬಿಟ್ಟು, ದುಬಾರಿ ಶುಲ್ಕ ಕಟ್ಟಿ ಓದಿಸುವುದಕ್ಕಿಂತ ಸರ್ಕಾರಿ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಓದಿಸಿ, ಪ್ರತಿಭಾವಂತರನ್ನಾಗಿ ಮಾಡಿ ಎಂದು ಕಿವಿಮಾತೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮಹದೇವು ಮಾತನಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ಶಿವರಾಂ, ನಗರಸಭಾ ಸದಸ್ಯೆ ಸೌಭಾಗ್ಯ, ಮಾಜಿ ಸದಸ್ಯ ಅನಿಲ್‌ಕುಮಾರ್, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ, ಕೃಷ್ಣಪ್ಪ, ಸಮಾಜಸೇವಕ ಇದ್‌ರಿಶ್ ಖಾನ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವರುದ್ರ, ಮಲ್ಲು, ವೆಂಕಟೇಶ್, ಸಮೀನಾ ಉಪಸ್ಥಿತರಿದ್ದರು.




