Monday, November 23, 2026

ಪ್ರಾಯೋಗಿಕ ಆವೃತ್ತಿ

ಮನಸ್ಸುಗಳನ್ನು ಒಗ್ಗೂಡಿಸುವ ಶಕ್ತಿ ಸಂಗೀತಕ್ಕಿದೆ ; ಧನಂಜಯ

ಪ್ರಭು ವಿ ಎಸ್

ಮನಸ್ಸು ಮನಸ್ಸುಗಳನ್ನು ಒಗ್ಗೂಡಿಸುವ ಮತ್ತು ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಶಕ್ತಿ
ಹಲವು ಶತಮಾನಗಳಿಂದ ಸಂಗೀತಕ್ಕೆ ಒಲಿದು ಬಂದಿದ್ದು ಇದು ಗಡಿಯಾಚೆಗಿನ ಸಂಬಂಧವನ್ನು ವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ಅಭಿಪ್ರಾಯಪಟ್ಟರು.

ಭಾರತ್ ವಿಕಾಸ್ ಪರಿಷತ್ ಮೈಸೂರು ಪ್ರಾಂತ, ವಿಕಾಸ್ ಪರಿಷತ್ ಟ್ರಸ್ಟ್ ಮದ್ದೂರು ಮತ್ತು ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ಮದ್ದೂರು ಆಯೋಜಿಸಿದ್ದ ಪ್ರಾಂತ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಪ್ರೇಮ, ಸಂಸ್ಕಾರ ಸೇತುವೆಯಾಗಿ ಭಾರತ್ ವಿಕಾಸ್ ಪರಿಷತ್ ದೇಶದೆಲ್ಲೆಡೆ ವಿವಿಧ ಆಯಾಮಗಳಲ್ಲಿ
ತನ್ನನ್ನು ತಾನು ತೊಡಗಿಸಿಕೊಂಡಿದ್ದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲಾ ಸ್ತರಗಳ
ಸೇವಾ ಕೈಂಕರ್ಯಗಳಿಗೆ ಗುಂಪುಗೂಡಿ ಸೇವೆ ನೀಡುತ್ತಿರುವುದು ಶ್ಲಾಘನೀಯೆವೆಂದು ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಆಯೋಜಿಸುವ ದೇಶಪ್ರೇಮ ಕುರಿತಾದ ಉಪಯುಕ್ತ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾ.ವಿ.ಪ ಮೈಸೂರು ಪ್ರಾಂತ ಅಧ್ಯಕ್ಷ ಆರ್.ನಾಗಭೂಷಣ್
ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಮತ್ತು ಸಮರ್ಪಣೆ ಉದ್ದೇಶದಿಂದ ಜನ್ಮ ತಳೆದ ಭಾರತ್ ವಿಕಾಸ್
ಪರಿಷತ್ ಎಲ್ಲಾ ಹಂತಗಳಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಆರೋಗ್ಯ, ಶಿಕ್ಷಣ, ಸ್ವಚ್ಚತೆ ಮತ್ತಿತರ
ಕಾರ್ಯಗಳಿಗೆ ಒತ್ತು ನೀಡಿರುವುದಾಗಿ ಜತೆಗೆ ದೇಶಪ್ರೇಮ ಮೂಡಿಸುವ ಸಂಬಂಧ ಉಪಯಕ್ತ
ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ವಿವರಿಸಿದರು.

ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ವೇಳೆ ಜಾನಪದ, ದೇಶಪ್ರೇಮದ
ಗೀತೆಗಳನ್ನು ಗಾಯನ ಮಾಡುವ ಮೂಲಕ ಹಾಜರಿದ್ದ ತೀರ್ಪುಗಾರರು, ವಿದ್ಯಾರ್ಥಿಗಳು ವಿಕಾಸ್ ಸದಸ್ಯರ
ಮನಗೆಲ್ಲುವಲ್ಲಿ ಯಶಸ್ವಿಯಾದರು. ಭಾ.ವಿ.ಪ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ ಪ್ರಾಸ್ತಾವಿಕ
ನುಡಿಗಳನ್ನಾಡಿದರು.

ಮದ್ದೂರು ಭಾ.ವಿ.ಪ ಕದಂಬ ಶಾಖೆಯ ಅಧ್ಯಕ್ಷ ಎಂ.ಮಹಾಲಿಂಗಯ್ಯ, ಭಾ.ವಿ.ಪ ಮಾಜಿ ಅಧ್ಯಕ್ಷ, ಶ್ರೀ ಸರ್ವಶಿವ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶಿವನಂಜಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ