ಕೆ ಆರ್ ಎಸ್ ಪಕ್ಷದ ನೂತನ ಕಛೇರಿ ಮಳವಳ್ಳಿ ತಾಲೂಕಿನಲ್ಲಿ ತೆರೆಯಲಾಯಿತು. ಈ ಕಾರ್ಯಕ್ರಮವೂ ಮಳವಳ್ಳಿ ಬಸ್ ನಿಲ್ದಾಣದಿಂದ ಪಾದಯಾತ್ರೆ ಮುಖಾಂತರವಾಗಿ ಮಳವಳ್ಳಿ – ರಾವಣಿ ರಸ್ತೆಯ, ಬಸ್ ಡಿಪೋ ಹೋಗುವ ಕಾರ್ನರ್ ನಲ್ಲಿ ಇರುವ ಪಕ್ಷದ ಕಚೇರಿಯ ತನಕ ತೆರಳಿ ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಕೆ ಆರ್ ಎಸ್ ಪಕ್ಷದ ಸಂಸ್ಥಾಪಕ, ರಾಜ್ಯ ಗೌರವ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯ ಅಧ್ಯಕ್ಷ ದೀಪಕ್ ಸಿ ಎನ್., ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಅರುಣ್ ಕುಮಾರ್ ಹೆಚ್ ಎಮ್., ರಮೇಶ್ ಗೌಡರ ಜೊತೆ ಚಾಮರಾಜನಗರ ಜಿಲ್ಲೆ, ಮೈಸೂರು ಜಿಲ್ಲೆ, ರಾಮನಗರ ಜಿಲ್ಲೆ, ಹಾಗೂ ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಳವಳ್ಳಿ ತಾಲ್ಲೂಕು ಘಟಕದಿಂದ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟು ಪ್ರತಿ ಗ್ರಾಮಗಳಲ್ಲಿ ಕೆ ಆರ್ ಎಸ್ ಪಕ್ಷದ ಘಟಕ ಸ್ಥಾಪಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.




