ಕೆ ಆರ್ ಪೇಟೆಯ ಕೆಪಿಎಸ್ಸಿ ಶಾಲೆಯಲ್ಲಿ ರೋಟರಿ ಕ್ಲಬ್ ಆಪ್ ಬೆಂಗಳೂರು ಮತ್ತು ರೋಟರಿ ಕ್ಲಬ್ ಸಕ್ಕರೆ ನಾಡು ಇವರ ಜೊತೆಗೂಡಿ. ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಮತ್ತು ಸ್ವಯಂ ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು
ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಅತ್ಯಾಚಾರಗಳು ಚಿಕ್ಕ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದ್ದು ಇದನ್ನು ತಡೆಗಟ್ಟಲು ರೋಟರಿ ಸಂಸ್ಥೆ ಹಲವು ಹೆಣ್ಣು ಮಕ್ಕಳ ಸ್ವಯಂ ತಾವೇ ದೈಹಿಕವಾಗಿ ಕರಾಟೆಯ ಮೂಲಕ ತಡೆಯುವ ಆತ್ಮರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚುವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಲ್ಲಾ ವಿದ್ಯಾರ್ಥಿನಿಯರಿಗೆ ಅಂತರಾಷ್ಟ್ರೀಯ ತರಬೇತು ದಾರರು ತರಬೇತಿ ನೀಡಿದರು
ಜೊತೆಗೆ ಆರೋಗ್ಯದ ಪರಿಣಾಮಗಳನ್ನು ಹೆಣ್ಣು ಮಕ್ಕಳು ಹೇಗೆ ನಿಭಾಯಿಸಬೆಕು ಎಂಬುವ ಜಾಗೃತಿ ಕಾರ್ಯಕ್ರಮವನ್ನು ಬೆಂಗಳೂರು ಕ್ಲಬ್ ಮಿಂಕು ಬಟರ್ ಜಿಲ್ಲಾ ನಿರ್ದೇಶಕರ ಸ್ವಾಸ್ಸು ಮಾತನಾಡಿ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆ ಬಗ್ಗೆ ಆರೋಗ್ಯದ ಬಗ್ಗೆ ಧೈರ್ಯ ತುಂಬಿದರು, ಇವರ ಜೊತೆಯಲ್ಲಿ ರೊಟೇರಿಯನ್ ಮಾಳವಿಕಾ ರೋಟೆರಿಯನ್ ಅನುಷಾ ತೋಟೇರಿಯನ್ ಚರಿತ ಕುಡಿಕೆ ಅವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಕರಾಟೆಯ ಒಂದು ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಜನಾರ್ಧನ್, ಶಾಲೆಯ ದೈವಿಕ, ತರಬೇತುದಾರಲೋಕೇಶ್ ಸಹಶಿಕ್ಷಕರಾದ ಸತೀಶ್, ಚಂದ್ರಸುನಿಲ್ ಕುಮಾರ್, ಸತೀಶ್ ನಾಯಕ್ ಹಾಗೂ ಸಹ ಉಪಾಧ್ಯಾಯರು ಭಾಗವಹಿಸಿದರು.
ರೋಟರಿ ಸಕ್ಕರೆ ನಾಡಿನ ಅಧ್ಯಕ್ಷ ನಂದೀಶ್, ಖಜಾಂಚಿ ಬಸವರಾಜು, ನಿರ್ದೇಶಕ ಕೃಷ್ಣ, ರೋಟರಿ ಕ್ಲಬ್ ಆಪ್ ಬೆಂಗಳೂರು ನಿರ್ದೇಶಕ ಅಭಿಜಿತ್ ಶಂಕರ್ ಹಾಗೂ ರೋಟರಿ ಕ್ಲಬ್ ಸಕ್ಕರೆನಾಡು ಕ್ಲಬ್ ಕಮುನಿಟಿ ಸರ್ವಿಸ್ ಛೇರ್ಮನ್ ಡಾ.ಎಸ್.ನಾರಾಯಣ್ ಸಲಹೆಯಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿತು.




