ಕೃಷಿಯನ್ನು ಲಾಭದಾಯಕವಾಗಿಸುವಲ್ಲಿ ಉಪಕಸಬುಗಳ ಅಳವಡಿಕೆ ಅಗತ್ಯ ಇವು ಕೃಷಿಕರಿಗೆ ಲಾಭ ತರುವ ಪೂರಕ ಚಟುವಟಿಕೆಯಾಗಲಿವೆ ಎಂದು ಸೊಮನಹಳ್ಳಿ ಎಜುಕೇಷನ್ ಸೊಸೈಟಿಯ ಮುಖ್ಯಸ್ಥ ಕರಣ್ ಕುಮಾರ್ ತಿಳಿಸಿದರು
ಶ್ರೀಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆಯು ಮದ್ದೂರಿನ ಡಾ.ಶಾಂತ ಮರಿಯಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಜೇನುಕೃಷಿ ತರಬೇತಿ ಹಾಗೂ ಉಚಿತ ಜೇನು ಪೆಟ್ಟಿಗೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ವಲಯ ಸಂಕಷ್ಠದ ಸ್ಥಿತಿಗೆ ಸಿಲುಕಿರುವ ಸಮಯದಲ್ಲಿ ಕೃಷಿಕರಿಗೆ ಉಪಕಸಬುಗಳ ಕುರಿತು ತರಬೇತಿ ನೀಡಿ ಅವರ ಬದುಕು ಹಸನುಗೊಳಿಸುವ ಜೊತೆಗೆ ಒಕ್ಕಲಿಗ ಸಮುದಾಯದ ಸಂಘಟನೆ ಜೊತೆಗೆ ಮಾಹಿತಿ ಶಿಕ್ಷಣ ಸಂವಹ ದಂತಹ ಚಟುವಟಿಕೆಯಲ್ಲಿ ತೊಡಗಿರುವ ಶ್ರೀಕಾಲಭೈರವ ಕ್ರೀಯಾಶೀಲ ಕಾರ್ಯಪಡೆಯ ಕಾರ್ಯ ಶ್ಲಾಘನೀಯವಾದದ್ದು ಎಂದ ಅವರು, ಕಾರ್ಯಪಡೆಯ ಚಟುವಟಿಕೆಗೆ ಸಮುದಾಯದ ಹಲವರಿಂದ ನೆರವು ದೊರಕುವ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಡಾ.ಹನಿಯೂರು ಚಂದ್ರೇಗೌಡ ಮಾತನಾಡಿ ಕೃಷಿ ಸಮೃದ್ದತೆಯ ಸಂಕೇತವಾಗಿತ್ತು, ಕೃಷಿಕರು ಸಾಂಘಿಕವಾಗಿ ಸಾಗುತ್ತಿದ್ದ ಕಾಲ ಇತ್ತು,
ಪರಸ್ಪರರಲ್ಲಿ ಸಹಬಾಳ್ವೆ ಇತ್ತು, ಇದೀಗ ಅದೆಲ್ಲಾವು ಕಾಣದಾಗುತ್ತಿದೆ ಎಂದು ವಿಷಾದಿಸಿದರು. ಕೃಷಿಕರು ಮುಯ್ಯಿ ಪದ್ದತಿ ಮತ್ತು ಉಪಕಸುಬಗಳು ಹಾಗು ವೈಜ್ಞಾನಿಕ ವಿಧಾನಗಳ ಜೊತೆಗೆ ನಾಟಿ ತಳಿಗಳ ಸಂರಕ್ಷಣೆಗೂ ಒತ್ತು ಕೊಡಬೇಕು ಎಂದರು.
ಕೃಷಿಕ ಫಸಲು ತೆಗೆಯುವಲ್ಲಿ ತೊರುವ ಆಸಕ್ತಿಯನ್ನು ಮಾರಾಟ ಮಾಡುವಲ್ಲಿಯು ತೊರಬೇಕು. ಅದಕ್ಕೆ ಬೇಕಾದ ಜಾಣ್ಮೆ ಕುಶಲತೆ ಬೆಳೆಸಿಕ್ಕೊಂಡು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ತಮ್ಮದೆ ಬ್ರಾಂಡ್ ಮೂಲಕ ಸ್ತಳೀಯಾ ಹಾಗು ಆನ್ ಲೈನ್ ಮಾರುಕಟ್ಟೆ ಕಂಡುಕ್ಕೊಳ್ಳಬೇಕು. ಆ ನಿಟ್ಟಿನಲ್ಲಿ ಶ್ರೀ ಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ ಒಕ್ಕಲಿಗ ಸಮುದಾಯಕ್ಕೆ ಮಾರ್ಗ ದರ್ಶಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನೀರ್ದೆಶಕಿ ರೇಖಾ ಮಾತನಾಡಿ ಜೇನು ಕೃಷಿ ಆರೊಗ್ಯ ಪರಿಸರ ಹಾಗು ಆರ್ಥಿಕ ವಾಗಿ ಸಹಕಾರಿಯಾಗಲಿದ್ದು, ಜೇನು ಸಾಕಣಿಕೆ ಸೇರಿ ಸ್ವ ಉದ್ಯೋಗ ಸ್ವ ಉದ್ದಿಮೆ ಮಾಡುವಲ್ಲಿ ಸರ್ಕಾರದಿಂದ ಸಿಗುವ ಸಾಲ ಸಹಾಯಧನಗಳ ನೆರವು ಪಡೆದುಕ್ಕೊಳ್ಳಲು ಮುಂದಾಗಬೇಕೆಂದರು. ಕಾರ್ಯಪಡೆಯ ಐವತ್ತು ಜನರು ತರಬೇತಿಯಲ್ಲಿ ಭಾಗವಹಿಸಿದ್ದರು.
ಮಂಡ್ಯದ ಲಯನ್ಸ್ ರವರು ಉಚಿತ ಜೇನುಪೆಟ್ಟಿಗೆಯನ್ನು ಕಾರ್ಯಪಡೆಯ ಮೂಲಕ ವಿತರಿಸುವ ಭರವಸೆ ನೀಡಿದ್ದಾರೆ ಎಂದು ಕಾರ್ಯಪಡೆಯ ಅಧ್ಯಕ್ಷ ಲಿಂಗೇಗೌಡ ತಿಳಿಸಿದರು.
ನಾಗಮಂಗಲ ತಾಲ್ಲೂಕು ಕಾರ್ಯಪಡೆ ಮುಖ್ಯಸ್ಥ ಹನುಮಂತು, ಶ್ರೀರಂಗಪಟ್ಟಣ ಕಾರ್ಯಪಡೆ ಮುಖ್ಯಸ್ಥ ತಡಗವಾಡಿ ದೇವೆಗೌಡ, ಪಾಂಡವಪುರ ಕಾರ್ಯಪಡೆ ಮುಖ್ಯಸ್ಥ ಹೇಮಂತ್ ಕುಮಾರ್, ಮಳವಳ್ಳಿ ಕಾರ್ಯಪಡೆ ಮುಖ್ಯಸ್ಥ ದುಗ್ಗನಹಳ್ಳಿ ಸಿದ್ದರಾಜು, ಮಂಡ್ಯ ತಾಲ್ಲೂಕು ಕಾರ್ಯಪಡೆ ಮುಖ್ಯಸ್ಥ ರವೀಂದ್ರ, ಮದ್ದೂರು ಕಾರ್ಯಪಡೆ ಮುಖ್ಯಸ್ಥ ಎಂ.ಪಿ.ಲಿಂಗೇಗೌಡ, ಗೌರವಾಧ್ಯಕ್ಷ ಎಸ್ ದಯಾನಂದ್, ನ.ಲಿ.ಕೃಷ್ಣ, ಸಂಪನ್ಮೂಲ ವ್ಯಕ್ತಿ ಈಶ್ವರ್, ರವಿ, ಪದಾಧಿಕಾರಿಗಳಾದ ಅವಿನಾಶ್,ಬ್ಯಾಡರಹಳ್ಳಿ ಶಿವಕುಮಾರ್,ಗುಡಿಗೆರೆ ಮಂಜುನಾಥ್ ಹಾಗೂ ರವಿ ಉಪಸ್ಥಿತರಿದ್ದರು




