ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ವಿದೇಶದಲ್ಲೂ ಭಾರತೀಯ ಸಮುದಾಯದ ಉದ್ಯಮಿಗಳನ್ನು ಕುರಿತು ಕನ್ನಡದಲ್ಲೇ ಮಾತನಾಡುವ ಮೂಲಕ ವಿದೇಶದಲ್ಲೂ ಕನ್ನಡದ ಕಂಪನ್ನು ಹರಡಿದ್ದಾರೆ.
ಇಂಗ್ಲೆಂಡ್ ನಲ್ಲೂ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದ ಮಂಡ್ಯ ಶಾಸಕ ರವಿಕುಮಾರ್#mandya#kannada pic.twitter.com/m9BV4CKwcL
— Nudikarnataka Media (@NudikarnatakaM) February 6, 2026
“>
ಮೊನ್ನೆ ಗುರುವಾರ ರಾತ್ರಿ ಲಂಡನ್ನಿನ ಹೌಸ್ ಆಫ್ ಕಾಮನ್ (ಪಾರ್ಲಿಮೆಂಟ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಭಾರತೀಯ ಉದ್ಯಮಿಗಳನ್ನು ಕುರಿತು ಮಾತನಾಡಿದ ಅವರು, ಬೆಂಗಳೂರು ಸಾಫ್ಟ್ ವೇರ್ ತಂತ್ರಜ್ಞಾನ ಹೆಸರುವಾಸಿಯಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಉದ್ಯಮಿಗಳು ಹೂಡಿಕೆ ಮಾಡಬೇಕೆಂದು ಮನವಿ ಮಾಡಿದರು.
ಇಡೀ ವಿಶ್ವಕ್ಕೆ ಸಾಫ್ಟ್ ವೇರ್ ಅನ್ನು ರಫ್ತು ಮಾಡುವುದು ನಮ್ಮ ಕರ್ನಾಟಕ. ಹೆಚ್ಎಎಲ್ ಇರೋದು ನಮ್ಮ ಕರ್ನಾಟಕ, ಕೆಜಿಎಫ್ ಹಾಗೂ ಹಟ್ಟಿ ಗಣಿಯಲ್ಲಿ ಚಿನ್ನವನ್ನು ಉತ್ಪಾದನೆ ಮಾಡುತ್ತೇವೆ. ಇಲ್ಲಿರುವ ಕೊಹಿನೂರು ವಜ್ರ ಕೂಡ ಭಾರತದ್ದೆ. ನಮ್ಮ ಮಂಡ್ಯದ ಎಥೆನಾಲ್ ಅನ್ನು ಹಿಂದೆ ಬ್ರಿಟಿಷ್ ಸರ್ಕಾರ 90 ದೇಶಗಳಿಗೆ ರಪ್ತು ಮಾಡುತ್ತಿದ್ದದ್ದು ಇತಿಹಾಸವಾಗಿದೆ.
ಹೂಡಿಕೆದಾರರಿಗೆ ಬೆಂಗಳೂರು ಸೂಕ್ತ ಸ್ಥಳವಾಗಿದೆ. ಹಾಗಾಗಿ ಇಲ್ಲಿ ಹೂಡಿಕೆ ಮಾಡಬೇಕು. ನಮ್ಮ ಸರ್ಕಾರ ನಿಮಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ಭರವಸೆ ನೀಡಿದರು.




