ಮಳವಳ್ಳಿ: ಅನುದಾನದ ಕಾಮಗಾರಿಯನ್ನು ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಸಿದ್ದಾರ್ಥನಗರ, ಎನ್‌ಇಎಸ್ ಬಡಾವಣೆಯಲ್ಲಿ ಸುಮಾರು 1.5 ಕೋಟಿರೂ ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಕಿರಿದಾದ ರಸ್ತೆಯಿಂದಾಗಿ ಹಳ್ಳಿಯಂತಿದ್ದ ಪಟ್ಟಣವನ್ನು ಸುಗಮ ಸಂಚಾರಕ್ಕಾಗಿ ಅಗಲವಾದ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಬೀದಿ ದೀಪಗಳನ್ನು ಅಳವಡಿಸುವುದರ ಮೂಲಕ ಸುಂದರ ಪಟ್ಟಣವನ್ನಾಗಿ ರೂಪುಗೊಳಿಸಲಾಗಿದೆ ಎಂದರು.
೧೦ನೇ ವಾರ್ಡ್ನ ಸಿದ್ದಾರ್ಥನಗರದ ೬,೭,೮ನೇ ಕ್ರಾಸ್, ಹಾಗೂ ೩ನೇ ವಾರ್ಡ್ನ ಎನ್‌ಇಎಸ್ ಬಡಾವಣೆಯಲ್ಲಿ ನಗರೋತ್ಥಾನ ಮೂರನೇ ಹಂತದ ಯೋಜನೆಯಡಿಯಲ್ಲಿ ರಸ್ತೆಮ ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮೀನುಗಾರಿಕೆಗೆ ಅನುಕೂಲವಾಗುವಂತೆ ಮೀನು ಮಾರುಕಟ್ಟೆ ನಿರ್ಮಾಣ, ಮಕ್ಕಳು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ಸ್ತ್ರೀ ಶಕ್ತಿ ಭವನ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಚಾಲನೆ ತರಬೇತಿ ನೀಡಲು ಕೆಎಸ್‌ಆರ್‌ಟಿಸಿ ಚಾಲಕ ತೆರಬೇತಿ ಕೇಂದ್ರ ಸೇರಿದಂತೆ ಹಲವಾರು ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಮನ್‌ಮುಲ್ ನಿರ್ದೇಶಕ ಅರ್.ಎನ್ ವಿಶ್ವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ ದೇವರಾಜು, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ಸಿದ್ದಾರ್ಥನಗರದ ಸಂತೋಷ್, ಮರಿದೇವರು, ವೇದಮೂರ್ತಿ, ಮಹೇಶ್, ಸಿದ್ದಪ್ಪ, ಕಿರಣ್‌ಶಂಕರ್, ವೆಂಕಟೇಶ್, ನಂಜುAಡಯ್ಯ, ನುರುಲ್ಲಾ, ಸಫಿವುಲ್ಲಾ, ಕೃಷ್ಣಪ್ಪ, ಶಿವರಾಜು, ವೆಂಕಟೇಶ್, ಲಕ್ಷ್ಮಮ್ಮ, ಗಂಗರಾಜೇಅರಸ್ ಸೇರಿದಂತೆ ಇತರರು ಇದ್ದರು.




